ADVERTISEMENT

ಗುರ್‌ಮೆಹರ್‌ ಕೌರ್‌ ಅವರ ಎಬಿವಿಪಿ ವಿರೋಧ ಪ್ರಕರಣ: ವಿವಾದ ಸೃಷ್ಟಿಸಿದ ಪ್ರತಾಪ್ ಸಿಂಹ ಟ್ವೀಟ್

ಪಿಟಿಐ
Published 27 ಫೆಬ್ರುವರಿ 2017, 18:58 IST
Last Updated 27 ಫೆಬ್ರುವರಿ 2017, 18:58 IST
ಗುರ್‌ಮೆಹರ್‌ ಕೌರ್‌ ಅವರ ಎಬಿವಿಪಿ ವಿರೋಧ ಪ್ರಕರಣ: ವಿವಾದ ಸೃಷ್ಟಿಸಿದ ಪ್ರತಾಪ್ ಸಿಂಹ ಟ್ವೀಟ್
ಗುರ್‌ಮೆಹರ್‌ ಕೌರ್‌ ಅವರ ಎಬಿವಿಪಿ ವಿರೋಧ ಪ್ರಕರಣ: ವಿವಾದ ಸೃಷ್ಟಿಸಿದ ಪ್ರತಾಪ್ ಸಿಂಹ ಟ್ವೀಟ್   

ನವದೆಹಲಿ (ಪಿಟಿಐ): ‘ನನ್ನ ತಂದೆಯನ್ನು ಕೊಲೆ ಮಾಡಿದ್ದು ಪಾಕಿಸ್ತಾನವಲ್ಲ, ಯುದ್ಧ’ ಎಂದು ಗುರ್‌ಮೆಹರ್‌ ಕೌರ್‌ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ‘ರಾಷ್ಟ್ರವಿರೋಧಿ ನಿಲುವು ಸಮರ್ಥಿಸಿಕೊಳ್ಳಲು ದಾವೂದ್‌ ಇಬ್ರಾಹಿಂ ಕೂಡ ತನ್ನ ತಂದೆ ಹೆಸರನ್ನು ಊರುಗೋಲಿನಂತೆ ಬಳಸಿಕೊಂಡಿರಲಿಲ್ಲ’ ಎಂಬ ಸಂದೇಶವಿರುವ ಚಿತ್ರವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರತಾಪ್‌ ಸಿಂಹ ಹಂಚಿಕೊಂಡಿರುವ ಚಿತ್ರದಲ್ಲಿ, ದಾವೂದ್‌ ಭಾವಚಿತ್ರದ ಕೆಳಗೆ, ‘1993ರಲ್ಲಿ ಜನರನ್ನು ನಾನು ಕೊಲ್ಲಲಿಲ್ಲ. ಬಾಂಬುಗಳು ಜನರನ್ನು ಕೊಂದವು’ ಎಂಬ ಮಾತು ಇದೆ. ಇದು ಗುರ್‌ಮೆಹರ್‌ ಅವರನ್ನು ಅಣಕಿಸುವಂತೆ ಇದೆ ಎಂಬ ಮಾತುಗಳು ಕೇಳಿಬಂದಿವೆ.

ತಮ್ಮ ಮಾತುಗಳು ವಿವಾದಕ್ಕೆ ತಿರುಗಿದ ನಂತರ ಟ್ವಿಟರ್‌ ಮೂಲಕ ಸ್ಪಷ್ಟನೆ ನೀಡಿರುವ ಪ್ರತಾಪ್, ‘ಹೋಲಿಕೆ ಹಾಗೂ ರೂಪಕಗಳ ನಡುವಣ ವ್ಯತ್ಯಾಸ ಮಾಧ್ಯಮಗಳಿಗೆ ತಿಳಿದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.