ADVERTISEMENT

ಚಾಂಡಿ ಸೋಲಾರ್ ಹಗರಣ: ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2016, 10:30 IST
Last Updated 29 ಜನವರಿ 2016, 10:30 IST
ಚಾಂಡಿ ಸೋಲಾರ್ ಹಗರಣ: ಹೈಕೋರ್ಟ್‌ ತಡೆ
ಚಾಂಡಿ ಸೋಲಾರ್ ಹಗರಣ: ಹೈಕೋರ್ಟ್‌ ತಡೆ   

ತಿರುವನಂತಪುರ (ಪಿಟಿಐ): ಸೋಲಾರ್ ಲಂಚ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಕೇರಳ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಮತ್ತು ಸಚಿವ ಆರ್ಯಾಡನ್‌ ಮೊಹಮ್ಮದ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ವಿಚಕ್ಷಣಾ ನ್ಯಾಯಾಲಯ ಗುರುವಾರ ನೀಡಿದ್ದ ಆದೇಶಕ್ಕೆ ಶುಕ್ರವಾರ ಕೇರಳ ಹೈಕೋರ್ಟ್‌ ತಡೆ ನೀಡಿದೆ.

ಈ ಪ್ರಕರಣದಲ್ಲಿ ವಿಚಕ್ಷಣಾ ನ್ಯಾಯಾಲಯ ಪ್ರಕರಣದ ಗಂಭೀರತೆ ಪರಿಗಣಿಸದೆ ಕೇವಲ  ಯಾಂತ್ರಿಕವಾಗಿ ನಿರ್ಧಾರ ಕೈಗೊಂಡಿದೆ ಎಂದಿರುವ ಹೈಕೋರ್ಟ್‌ ಈ ತೀರ್ಪಿಗೆ 2 ತಿಂಗಳ ತಡೆ ನೀಡಿತು.

ತ್ರಿಶ್ಶೂರ್‌ನಲ್ಲಿರುವ ವಿಚಾರಣಾ ಆಯುಕ್ತ ಮತ್ತು ವಿಶೇಷ ನ್ಯಾಯಾಧೀಶರು (ವಿಚಕ್ಷಣಾ  ದಳ), ಚಾಂಡಿ ಮತ್ತು ಆರ್ಯಾಡನ್‌ ಮೊಹಮ್ಮದ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಜಾಗೃತ ದಳಕ್ಕೆ ಗುರುವಾರ ನಿರ್ದೇಶನ ನೀಡಿದ್ದರು.

ಸೋಲಾರ್‌ ಹಗರಣದ ಪ್ರಮುಖ ಆರೋಪಿ ಸರಿತಾ ಎಸ್‌. ನಾಯರ್‌ ಅವರು  ಬುಧವಾರ ನ್ಯಾಯಮೂರ್ತಿ ಶಿವರಾಜನ್‌ ಆಯೋಗದ ಮುಂದೆ ಹಾಜರಾಗಿ, ಮುಖ್ಯಮಂತ್ರಿ ಚಾಂಡಿ ಅವರ ನಿಕಟವರ್ತಿಗೆ ₹ 1.90 ಕೋಟಿ ಮತ್ತು ಸಚಿವ ಮೊಹಮ್ಮದ್‌ಗೆ ₹40 ಲಕ್ಷ ಲಂಚ ನೀಡಿದ್ದಾಗಿ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT