ADVERTISEMENT

ಚೆನ್ನೈ ಸ್ಫೋಟ: ಬೆಂಗಳೂರಿಗೆ ತನಿಖಾ ತಂಡ

​ಪ್ರಜಾವಾಣಿ ವಾರ್ತೆ
Published 2 ಮೇ 2014, 9:56 IST
Last Updated 2 ಮೇ 2014, 9:56 IST

ಚೆನ್ನೈ (ಪಿಟಿಐ) : ಬೆಂಗಳೂರು–ಗುವಾಹಟಿ ರೈಲಿನಲ್ಲಿ ಗುರುವಾರ ಸಂಭವಿಸಿದ ಅವಳಿ ಸ್ಫೋಟಕ್ಕೆ ಬಳಸಿದ ಸ್ಫೋಟಕವನ್ನು  ಬೆಂಗಳೂರಿನಲ್ಲೇ ರೈಲಿನಲ್ಲಿ ಅಡಗಿಸಿಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡಿನ ವಿಶೇಷ ತನಿಖಾ ತಂಡ ಬೆಂಗಳೂರಿಗೆ ಧಾವಿಸಿದೆ.

ಈ ದುಷ್ಕೃತ್ಯಕ್ಕೆ ಕರ್ನಾಟಕದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸುತ್ತಿರುವ ಉಗ್ರರ ತಂಡ ಸಹಾಯ ಮಾಡಿದ್ದು, ಟೈಮರ್ ಅಳವಿಡಿಸಿದ್ದ ಸ್ಫೋಟಕವನ್ನು ರೈಲು ಬೆಂಗಳೂರಿನಲ್ಲಿ ಇದ್ದಾಗಲೇ ಅಡಗಿಸಿಡಲಾಗಿತ್ತು ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕೇಂದ್ರ ತನಿಖಾ ತಂಡ ಮತ್ತು ವಿಭಾಗದ ಪೊಲೀಸರು ನೆರೆ ರಾಜ್ಯದ ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿದ್ದು, ಚೆನ್ನೈ ಕೇಂದ್ರ ರೈಲ್ವೆ ನಿಲ್ದಾಣದ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.