ADVERTISEMENT

ಜಾಟ್ ಮೀಸಲಾತಿ ಮಸೂದೆ ಸರ್ವಾನುಮತದಿಂದ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2016, 11:04 IST
Last Updated 29 ಮಾರ್ಚ್ 2016, 11:04 IST
ಜಾಟ್ ಮೀಸಲಾತಿ ಮಸೂದೆ ಸರ್ವಾನುಮತದಿಂದ ಅಂಗೀಕಾರ
ಜಾಟ್ ಮೀಸಲಾತಿ ಮಸೂದೆ ಸರ್ವಾನುಮತದಿಂದ ಅಂಗೀಕಾರ   

ಚಂಡೀಗಡ (ಪಿಟಿಐ): ಜಾಟರು ಹಾಗೂ ಇತರ ಐದು ಸಮುದಾಯಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಹರಿಯಾಣ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿದೆ.

ಈ ಮೂಲಕ ಮೀಸಲಾತಿ ಒದಗಿಸಲು ಜಾಟ್‌ ಸಮುದಾಯ ನೀಡಿದ್ದ ಗಡುವಿಗೂ ಮುನ್ನವೇ ಅವರ ಕನಸು ಈಡೇರಿದೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ‘ಹರಿಯಾಣ ಹಿಂದುಳಿದ ವರ್ಗಗಳ ಮಸೂದೆ–2016(ಸೇವೆ ಹಾಗೂ ಶಿಕ್ಷಣದಲ್ಲಿ ಮೀಸಲಾತಿ)’ ಹಾಗೂ ‘ಹರಿಯಾಣ ಹಿಂದುಳಿದ ವರ್ಗಗಳ ಆಯೋಗ ಮಸೂದೆ–2016’ಯನ್ನು ವಿಧಾನಸಭೆಯಲ್ಲಿ ಮಂಡಿಸಿದರು.

ADVERTISEMENT

ಈ ಎರಡೂ ಮಸೂದೆಗಳು ಸರ್ವಾನುಮತದಿಂದ ಅಂಗೀಕಾರ ಪಡೆದವು. ತಮ್ಮ ಮೂವರು ಶಾಸಕರ ಅಮಾನತು ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿರುವ ಕಾಂಗ್ರೆಸ್‌ ಸದಸ್ಯರು ಕಲಾಪದಿಂದ ದೂರ ಉಳಿದರು.

ಇನ್ನು, ಈ ಕಾಯ್ದೆಯನ್ನು ಸಂವಿಧಾನದ 31ಬಿ ಕಲಂನಡಿಯ 9ನೇ ಅನುಬಂಧದಲ್ಲಿ ಸೇರ್ಪಡೆಗೊಳಿಸುವಂತೆ ಹರಿಯಾಣ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿದೆ.

ಉಭಯ ಮಸೂದೆಗಳಿಂದಾಗಿ ಜಾಟ್‌ ಹಾಗೂ ಜಾಟ್‌ ಸಿಖ್ಖ, ರೊರ್‌, ಬಿಷ್ಣೋಯಿ, ತ್ಯಾಗಿ ಮತ್ತು ಮುಲ್ಲಾ ಜಾಟ್‌/ಮುಸ್ಲಿಂ ಜಾಟ್‌ –ಇತರ ಐದು ಸಮುದಾಯಗಳಿಗೆ ಸರ್ಕಾರಿ ಉದ್ಯೋಗಗಳು ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಸೌಲಭ್ಯ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.