ADVERTISEMENT

ಜಾರ್ಖಂಡ್‌ನಲ್ಲಿ ಬಿಜೆಪಿ, ಕಾಶ್ಮೀರ ಅತಂತ್ರ?

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2014, 13:52 IST
Last Updated 23 ಡಿಸೆಂಬರ್ 2014, 13:52 IST

ಶ್ರೀನಗರ/ ರಾಂಚಿ (ಪಿಟಿಐ): ಜಮ್ಮು–ಕಾಶ್ಮೀರ ಮತ್ತು ಜಾರ್ಖಂಡ್‌ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಪ್ರಸಕ್ತ ಅಂಕಿಅಂಶಗಳನ್ನು ಗಮನಿಸಿದರೆ ಒಂದೆಡೆ ಅತಂತ್ರ ಮತ್ತೊಂದಡೆ ಸರ್ಕಾರ ರಚನೆಯ ಮುನ್ಸೂಚನೆಗಳಿವೆ.

ಕಣಿವೆ ರಾಜ್ಯದಲ್ಲಿ ವಿರೋಧ ಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷವು ಮುನ್ನಡೆ ಸಾಧಿಸಿದೆ.ಆದರೆ ಬಹುಮತಕ್ಕೆ ಬೇಕಾಗುವ ಸ್ಥಾನಗಳ ಸಮೀಪ ಬರುವುದು ಅನುಮಾನ. ಇನ್ನು, ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಲಕ್ಷಣಗಳಿದ್ದು, ಅತಂತ್ರ ವಿಧಾನಸಭೆ ನಿರ್ಮಾಣ ಸಾಧ್ಯತೆ ದಟ್ಟವಾಗಿದೆ.

ಆದರೆ ಜಾರ್ಖಂಡ್‌ನಲ್ಲಿ ಮಾತ್ರ ಬಿಜೆಪಿ ಎಲ್ಲಾ ಪಕ್ಷಗಳಿಗಿಂತಲೂ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚನೆಯ ಸುಳಿವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.