ADVERTISEMENT

ಜಿಯೊ: ಏಪ್ರಿಲ್‌ನಿಂದ ಹೊಸ ಕೊಡುಗೆ

ಪಿಟಿಐ
Published 21 ಫೆಬ್ರುವರಿ 2017, 20:03 IST
Last Updated 21 ಫೆಬ್ರುವರಿ 2017, 20:03 IST
ಜಿಯೊ: ಏಪ್ರಿಲ್‌ನಿಂದ ಹೊಸ ಕೊಡುಗೆ
ಜಿಯೊ: ಏಪ್ರಿಲ್‌ನಿಂದ ಹೊಸ ಕೊಡುಗೆ   

ನವದೆಹಲಿ: ಮೊಬೈಲ್‌ ಸಂಪರ್ಕ ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸಿರುವ ರಿಲಯನ್ಸ್‌ ಜಿಯೊ, ಏಪ್ರಿಲ್‌ 1 ರಿಂದ ಕೆಲವು ಹೊಸ ಕೊಡುಗೆಗಳನ್ನು ಘೋಷಿಸಿದೆ.

‘ಪ್ರತಿಸ್ಪರ್ಧಿ ಸಂಸ್ಥೆಗಳ ದರಗಳಿಗೆ ಸರಿಸಮನಾಗಿಯೇ ದರ ವಿಧಿಸಲಾಗುವುದು.  ಈ ಮೊದಲೇ ಘೋಷಿಸಿರುವಂತೆ ತಿಂಗಳಿಗೆ ₹ 149 ಪಾವತಿಸಿ ಡೇಟಾ ಮತ್ತು ಕರೆ ಸೌಲಭ್ಯ ಪಡೆಯಬಹುದು.  ಶೇ 20ರಷ್ಟು ಹೆಚ್ಚುವರಿ ಡೇಟಾ ನೀಡಲಾಗುವುದು. ಏಪ್ರಿಲ್‌ 1 ರ ನಂತರವೂ ಹೊಸ ದರಗಳ ಅನ್ವಯ ಧ್ವನಿ ಕರೆ ಮತ್ತು ರೋಮಿಂಗ್‌ ಉಚಿತವಾಗಿರಲಿವೆ. ಇದರಲ್ಲಿ ಯಾವುದೇ ಮರೆಮಾಚುವ ಶುಲ್ಕಗಳು ಇರುವುದಿಲ್ಲ’ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ತಿಳಿಸಿದರು.

ಹೊಸ ವರ್ಷಕ್ಕೆ ನೀಡಿದ್ದ ಉಚಿತ ಕರೆ ಮತ್ತು ಡೇಟಾ ಯೋಜನೆ ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಏಪ್ರಿಲ್‌ 1 ರಿಂದ ಹೊಸ ದರ ಯೋಜನೆ ಜಾರಿಗೆ ಬರಲಿದೆ. ತನ್ನ ಮೊದಲ 10 ಕೋಟಿ ಗ್ರಾಹಕರಿಗೆ ಸಂಸ್ಥೆಯು ‘ಪ್ರೈಮ್‌ ಸದಸ್ಯತ್ವ’  ಸೌಲಭ್ಯ ಪರಿಚಯಿಸಿದೆ.  ಚಂದಾದಾರರು ₹99 ಪಾವತಿಸಿ  ಈ  ಸದಸ್ಯತ್ವ ಪಡೆದುಕೊಳ್ಳಬೇಕು. ನಂತರ  ಪ್ರತಿ ತಿಂಗಳೂ ₹303 ಪಾವತಿಸಿದರೆ 2018ರ ಮಾರ್ಚ್‌ವರೆಗೆ ಅನಿಯಮಿತ ಕರೆ, ಡೇಟಾ ಮತ್ತು ಇತರೆ ಸೌಲಭ್ಯಗಳು ದೊರೆಯಲಿವೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಜಿಯೊ ಸೇವೆ ಆರಂಭಿಸಿದ 170 ದಿನಗಳಲ್ಲಿ 10 ಕೋಟಿ ಚಂದಾದಾರರು ಸೇರ್ಪಡೆ ಯಾಗಿದ್ದಾರೆ’ ಎಂದರು.

‘ದಿನಕ್ಕೆ 200 ಕೋಟಿ ನಿಮಿಷದ ಧ್ವನಿ ಕರೆ, 100 ಕೋಟಿ ಜಿ.ಬಿಯಷ್ಟು ವಿಡಿಯೊ ಕರೆ ಅಥವಾ 3.3 ಕೋಟಿ ಜಿ.ಬಿ ಡೇಟಾ ಬಳಕೆಯಾಗಿದೆ. ಈ ಮೂಲಕ  ಮೊಬೈಲ್‌ ಡೇಟಾ ಬಳಕೆ ಯಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ಏರಿಸಿದೆ’ ಎಂದು ಹೇಳಿದರು.

ಪ್ರೈಮ್‌ ಸದಸ್ಯತ್ವ
* ಸದಸ್ಯತ್ವ ಪಡೆಯಲು ಒಂದು ಬಾರಿಗೆ ₹ 99 ಪಾವತಿ
* ಪ್ರತಿ ತಿಂಗಳೂ ₹ 303 ಪಾವತಿಸುವ ಮೂಲಕ ಅನಿಯಮಿತ ಡೇಟಾ ಮತ್ತು ಕರೆ ಸೌಲಭ್ಯ

ಮುಖ್ಯಾಂಶಗಳು
* ಏ. 1ರ ನಂತರವೂ ಉಚಿತ ಕರೆ, ರೋಮಿಂಗ್‌  ಸೌಲಭ್ಯ
* ಶೇ 20ರಷ್ಟು ಹೆಚ್ಚುವರಿ ಡೇಟಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.