ADVERTISEMENT

ಜುಲೈ 10ಕ್ಕೆ ಕೇಂದ್ರ ಬಜೆಟ್‌

​ಪ್ರಜಾವಾಣಿ ವಾರ್ತೆ
Published 23 ಜೂನ್ 2014, 10:20 IST
Last Updated 23 ಜೂನ್ 2014, 10:20 IST

ನವದೆಹಲಿ (ಪಿಟಿಐ): ಭಾರೀ ನಿರೀಕ್ಷೆಯ ಬಿಜೆಪಿ ಸರ್ಕಾರದ ಚೊಚ್ಚಲ ರೈಲ್ವೆ ಬಜೆಟ್‌ ಜುಲೈ 8ಕ್ಕೆ ಮತ್ತು ಸಾಮಾನ್ಯ ಬಜೆಟ್‌ ಜುಲೈ 10ಕ್ಕೆ ಮಂಡನೆಯಾಗುವ ಸಾಧ್ಯತೆಗಳಿವೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ಜುಲೈ 8ಕ್ಕೆ ರೈಲ್ವೆ ಬಜೆಟ್‌ ಮಂಡಿಸಿದರೆ, ಜುಲೈ 10ಕ್ಕೆ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರು ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ.

ಈ ಎರಡು ಬಜೆಟ್‌ಗಳು ಮಧ್ಯಂತರ ಬಜೆಟ್‌ ಆಗಿರಲಿವೆ. ರೈಲ್ವೆ ಮತ್ತು ಹಣಕಾಸು ಇಲಾಖೆಗಳಲ್ಲಿ ಬಜೆಟ್‌ ಪೂರ್ವ ಸಿದ್ಧತೆಗಳು ಬಿರುಸಿನಿಂದ ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT