ADVERTISEMENT

ತಡೆ ಕೋರಿ ‘ಸುಪ್ರೀಂ’ಗೆ ಮನವಿ

ಲೋಕಪಾಲ ಶೋಧನಾ ಸಮಿತಿ ರಚನೆಗೆ ಮುಂದಾದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

ನವದೆಹಲಿ: ದೇಶದ ಮೊದಲ ಲೋಕ­ಪಾಲರನ್ನು ನೇಮಕ ಮಾಡಲು ಯುಪಿಎ–2 ಸರ್ಕಾರ ಬಹುಶಃ ಕೊನೆಯ ಪ್ರಯತ್ನಕ್ಕೆ ಕೈ ಹಾಕಿದೆ. ಈ ನಿಟ್ಟಿನಲ್ಲಿ ಶೋಧನಾ ಸಮಿತಿ ರಚಿಸಲು ಇದೇ 24 ಮತ್ತು 28ರಂದು ಸಭೆ ಕರೆದಿದೆ. ಆದರೆ, ಇದನ್ನು ತಡೆಯಲು ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಅರ್ಜಿ ಸಲ್ಲಿಕೆಯಾಗಿದೆ.

ಲೋಕಪಾಲರು ಮತ್ತು ಅದರ ಸದಸ್ಯರ ನೇಮಕಕ್ಕೆ ಶೋಧನಾ ಸಮಿತಿ ರಚನೆಯ ಆಯ್ಕೆ ಸಮಿತಿ ಸದಸ್ಯರಿಗೆ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಈ ಕುರಿತು ಇದೇ 11ರಂದು ಪತ್ರ ಬರೆದಿದ್ದಾರೆ.

ಲೋಕಪಾಲ ಮತ್ತು ಲೋಕಾ­ಯುಕ್ತ ಕಾಯ್ದೆ 2014ರಲ್ಲಿ ಉಲ್ಲೇಖಿವಾಗಿರುವ ನಿಯಮಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ  ಈಗಾ­ಗಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿರುವ ‘ಕಾಮನ್‌ ಕಾಸ್‌’ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ), ಈಗ ಲೋಕ­ಪಾಲರ ನೇಮಕಾತಿಗೆ ಶೋಧನಾ ಸಮಿತಿ ರಚಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಈ  ಅರ್ಜಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.