ADVERTISEMENT

ತಾಪಮಾನ ಏರಿಕೆಯಿಂದ ಕರಗಲಿದೆ ಭೂಪದರ

ರಾಯಿಟರ್ಸ್
Published 13 ಏಪ್ರಿಲ್ 2017, 19:30 IST
Last Updated 13 ಏಪ್ರಿಲ್ 2017, 19:30 IST
ತಾಪಮಾನ ಏರಿಕೆಯಿಂದ ಕರಗಲಿದೆ ಭೂಪದರ
ತಾಪಮಾನ ಏರಿಕೆಯಿಂದ ಕರಗಲಿದೆ ಭೂಪದರ   
ಲಂಡನ್‌: ಜಾಗತಿಕ ತಾಪಮಾನ ಏರಿಕೆಯಿಂದ ಉತ್ತರ ಮತ್ತು ದಕ್ಷಿಣ ಧ್ರುವಗಳ ಸಮೀಪದ ಪ್ರದೇಶಗಳ ‘ಪರ್ಮಫ್ರಾಸ್ಟ್‌’ (ಶೀತ ಕೆಳಭೂಸ್ತರ) ಕರಗುವ ಅಪಾಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
 
ವಿಶ್ವದ ವಿವಿಧ ದೇಶಗಳು ಪ್ಯಾರಿಸ್‌ ಹವಾಮಾನ ಒಪ್ಪಂದದ ಜಾರಿಗೆ ಪ್ರಯತ್ನಿಸದಿದ್ದರೆ ವಿಸ್ತೀರ್ಣದಲ್ಲಿ ಆಸ್ಟ್ರೇಲಿಯಾ ಖಂಡದಷ್ಟಿರುವ ‘ಪರ್ಮಫ್ರಾಸ್ಟ್‌’  ನಾಶವಾಗಲಿದೆ ಎಂದು ಅಧ್ಯಯನ ತಿಳಿಸಿದೆ.
***
ಏನಿದು ‘ಪರ್ಮಫ್ರಾಸ್ಟ್‌’
ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಘನೀಭವನ ಬಿಂದುವಿಗಿಂತ ಕಡಿಮೆ ತಾಪದಲ್ಲಿರುವ ಕೆಳ ಭೂಸ್ತರವನ್ನು ‘ಪರ್ಮಫ್ರಾಸ್ಟ್‌’ ಎನ್ನುವರು
 
ಕರಗಿದರೆ ಏನಾಗುತ್ತದೆ
‘ಪರ್ಮಫ್ರಾಸ್ಟ್‌’ ಕಾರ್ಬನ್‌ ಡೈಆಕ್ಸೈಡ್‌ ಮತ್ತು ಮಿಥೇನ್‌ಅನ್ನು ತನ್ನಲ್ಲಿ ಹಿಡಿದಿಟ್ಟುಕೊಂಡಿರುತ್ತದೆ. ಈ ಪದರ ಕರಗಿದರೆ ಅಪಾಯಕಾರಿ ಅನಿಲ ವಾತಾವರಣವನ್ನು ಸೇರುತ್ತದೆ. ಭೂಪದರ ಕರಗಿದರೆ ಕಟ್ಟಡಗಳು ಕುಸಿದು ಬೀಳುವ ಅಪಾಯವೂ ಇದೆ.
 
3.5 ಕೋಟಿ
ಜನರು ಉತ್ತರ ಮತ್ತು ದಕ್ಷಿಣ ಧ್ರುವಗಳ ಸಮೀಪದ ಪ್ರದೇಶಗಳ ನಗರ ಅಥವಾ ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ.
***
l ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದರೆ ಭೂಮಿಯ ಶೇ 40 ರಷ್ಟು ಶೀತ ಕೆಳಭೂಸ್ತರ ಕರಗುವ ಅಪಾಯ
l ಭೂಮಿಯ ತಾಪಮಾನ ಪ್ರತಿ ಒಂದು ಡಿಗ್ರಿಯಷ್ಟು ಏರಿಕೆಯಾದರೆ 40 ಲಕ್ಷ ಚದರ ಕಿ.ಮೀ.ನಷ್ಟು ‘ಪರ್ಮಫ್ರಾಸ್ಟ್‌’ ನಾಶವಾಗುವ ಸಾಧ್ಯತೆ
l ಬ್ರಿಟನ್‌ನ ಯೂನಿವರ್ಸಿಟಿ ಆಫ್‌ ಎಕ್ಸೆಟೆರ್‌, ಯೂನಿವರ್ಸಿಟಿ ಆಫ್‌ ಲೀಡ್ಸ್‌ ಮತ್ತು ಬ್ರಿಟನ್‌ ಹವಾಮಾನ ಇಲಾಖೆ ಜಂಟಿಯಾಗಿ ಅಧ್ಯಯನ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.