ADVERTISEMENT

ತೆಲುಗು ನಟ ಮಾದಾಲ ರಂಗಾರಾವ್‌ ನಿಧನ

ಪಿಟಿಐ
Published 27 ಮೇ 2018, 19:30 IST
Last Updated 27 ಮೇ 2018, 19:30 IST
ರಂಗರಾವ್
ರಂಗರಾವ್   

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ, ಮಾದಾಲ ರಂಗಾರಾವ್ (69) ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮೇ 19ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕ್ರಾಂತಿಕಾರಿ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ರಂಗಾರಾವ್ ‘ಕೆಂಪು ಸೂರ್ಯ’ ಎಂದೇ ಖ್ಯಾತರಾಗಿದ್ದರು. ಸಿಪಿಐ ನೇತೃತ್ವದ ಪ್ರಜಾ ನಾಟ್ಯ ಮಂಡಳಿಯ ಸದಸ್ಯರೂ ಆಗಿದ್ದರು.

‘ಯುವಥರಂ ಕಾದಿಲಿಂದಿ’, ‘ಎರ್ರ ಮಲ್ಲೆಲು’, ‘ಪ್ರಜಾ ಶಕ್ತಿ’, ‘ಸ್ವರಾಜ್ಯಂ’, ‘ವಿಪ್ಲವಶಂಖಂ’ ಅವರಿಗೆ ಖ್ಯಾತಿ ತಂದುಕೊಟ್ಟ ಚಿತ್ರಗಳು.

ADVERTISEMENT

‘ಯುವಥರಂ ಕಾದಿಲಿಂದಿ’ ಚಿತ್ರದಲ್ಲಿನ ನಟನೆಗಾಗಿ ರಂಗಾರಾವ್ ಅವರಿಗೆ ಆಂಧ್ರಪ್ರದೇಶ ಸರ್ಕಾರ ನಂದಿ ಪುರಸ್ಕಾರ ನೀಡಿ ಗೌರವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.