ADVERTISEMENT

ದೆಹಲಿ ನಯಾ ಬಜಾರ್‌ನಲ್ಲಿ ಸ್ಫೋಟ : ಒಬ್ಬ ಸಾವು, ಇಬ್ಬರು ಗಾಯ

ಪಿಟಿಐ
Published 25 ಅಕ್ಟೋಬರ್ 2016, 11:22 IST
Last Updated 25 ಅಕ್ಟೋಬರ್ 2016, 11:22 IST
ದೆಹಲಿ ನಯಾ ಬಜಾರ್‌ನಲ್ಲಿ ಸ್ಫೋಟ : ಒಬ್ಬ ಸಾವು, ಇಬ್ಬರು ಗಾಯ
ದೆಹಲಿ ನಯಾ ಬಜಾರ್‌ನಲ್ಲಿ ಸ್ಫೋಟ : ಒಬ್ಬ ಸಾವು, ಇಬ್ಬರು ಗಾಯ   
ನವದೆಹಲಿ: ಉತ್ತರ ದೆಹಲಿಯ ನಯಾ ಬಜಾರ್‌ ಬಳಿ ಮಂಗಳವಾರ ಸ್ಫೋಟ ಸಂಭವಿಸಿದ್ದು, ಒಬ್ಬ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
 
‘ಘಟನೆ ಸಂಬಂಧ ಈಗಾಗಲೇ ತನಿಖೆ ಆರಂಭಿಸಲಾಗಿದೆ, ಪ್ರಕರಣದ ನಿಖರ ಕಾರಣವನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು’ ಎಂದು  ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 
 
ಈಗಾಗಲೇ ಘಟನಾ ಸ್ಥಳದಲ್ಲಿ ದೊರೆತ ಹಲವು ಅನುಮಾನಾಸ್ಪದ ವಸ್ತುಗಳ ಮಾದರಿಯನ್ನು ವಿಶೇಷ ತನಿಖಾದಳ ತಪಾಸಣೆಗೆ ಒಳಪಡಿಸಿದೆ. ದೆಹಲಿ ಪೊಲೀಸರು ನಯಾ ಬಜಾರ್‌ ಸುತ್ತಲಿನ ಪ್ರದೇಶದಲ್ಲಿ ತೀರ್ವ ಕಟ್ಟೆಚ್ಚರ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.