ADVERTISEMENT

ದೇಶದಾದ್ಯಂತ ಕಾಲ್ನಡಿಗೆ ಯಾತ್ರೆ ಮೂಲಕ ರಕ್ತದಾನ ಜಾಗೃತಿ ಮೂಡಿಸಿದ ಯುವಕ; ಇಲ್ಲಿವರೆಗೆ ಕ್ರಮಿಸಿದ್ದು 6,000 ಕಿಮೀ!

ಏಜೆನ್ಸೀಸ್
Published 20 ಏಪ್ರಿಲ್ 2018, 2:11 IST
Last Updated 20 ಏಪ್ರಿಲ್ 2018, 2:11 IST
ಕಿರಣ್ ವರ್ಮಾ  ಫೋಟೊ ಕೃಪೆ: ಫೇಸ್‍ಬುಕ್
ಕಿರಣ್ ವರ್ಮಾ ಫೋಟೊ ಕೃಪೆ: ಫೇಸ್‍ಬುಕ್   

ತಿರುವನಂತಪುರಂ: ದೇಶದಾದ್ಯಂತ ಕಾಲ್ನಡಿಗೆ ಯಾತ್ರೆ ಕೈಗೊಂಡು 33ರ ಹರೆಯದ ಕಿರಣ್ ವರ್ಮಾ ಎಂಬ ಯುವಕ ಜನರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ರಕ್ತದಾನದ ಬಗ್ಗೆ ಜಾಗೃತಿ ಮತ್ತು ರಕ್ತದಾನದ ಮೂಲಕ ಹೇಗೆ ಪ್ರಾಣ ಉಳಿಸಬಹುದು ಎಂದು ಅರಿವು ಮೂಡಿಸಲು ಕಿರಣ್ ಈ ಯಾತ್ರೆ ಕೈಗೊಂಡಿದ್ದರು. ಶ್ರೀನಗರದಿಂದ ತಿರುವನಂತಪುರಂವರೆಗೆ ಸಂಚರಿಸಿ ಜಾಗೃತಿ ಮೂಡಿಸುತ್ತಿರುವ ಈ ಯುವಕ ಈಗಾಗಲೇ 6,000 ಕಿಮೀ ಕ್ರಮಿಸಿದ್ದಾರೆ.

ಅಂದ ಹಾಗೆ ಕಿರಣ್ ಈ ರೀತಿಯ ಜಾಗೃತಿ ಕಾರ್ಯ ಕೈಗೊಂಡಿರುವುದರ ಹಿಂದೆ ಒಂದು ಕತೆ ಇದೆ. ಕಿರಣ್ ಅವರ ಅಮ್ಮ ಕ್ಯಾನ್ಸರ್‍‍ನಿಂದಾಗಿ ಮರಣಹೊಂದಿದ್ದರು. ಆನಂತರ ಕಿರಣ್ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ಸಿಂಪ್ಲಿ ಬ್ಲಡ್ ಎಂಬ ಆ್ಯಪ್ ತಯಾರಿಸಿ ಅದರಲ್ಲಿ ವರ್ಚ್ಯುವಲ್ ರಕ್ತದಾನ ಮಾಡುವಂತೆ ಪ್ರೇರೇಪಿಸಿದ್ದರು. ಈ ಆ್ಯಪ್ ಬಗ್ಗೆಯೂ ಜನರಿಗೆ ಮಾಹಿತಿ ನೀಡುತ್ತಾ ಕಿರಣ್ ದೇಶದಾದ್ಯಂತ ಸಂಚರಿಸಿದ್ದಾರೆ.

ಹೀಗೆ ಸಂಚರಿಸುವಾಗ ತಮ್ಮ ಅನುಭವಗಳನ್ನು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡುತ್ತಾ ಹೋಗಿದ್ದಾರೆ. ಉತ್ತರದಿಂದ ಪೂರ್ವ, ಪಶ್ಚಿಮದಿಂದ ದಕ್ಷಿಣದ ರಾಜ್ಯಗಳಿಗೆ ಸಂಚರಿಸುತ್ತಾ ನಾನೀಗ ಇಲ್ಲಿಯವರೆಗೆ 6000 ಕಿಮೀ ಕ್ರಮಿಸಿದ್ದೇನೆ, ಇದರಲ್ಲಿ  2600 ಕಿಮೀಗಳನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದರೆ 3400 ಕಿಮೀ ಕ್ರಮಿಸಲು ಇತರ ಸಾರಿಗೆ ವ್ಯವಸ್ಥೆಯನ್ನು ಬಳಸಿರುವುದಾಗಿ ಕಿರಣ್ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.