ADVERTISEMENT

ಪಕ್ಷದಲ್ಲಿ ಎಲ್ಲ ಸರಿಯಾಗಿದೆ: ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 11:10 IST
Last Updated 30 ಮಾರ್ಚ್ 2015, 11:10 IST

ನವದೆಹಲಿ(ಪಿಟಿಐ): ‘ಆಮ್ ಆದ್ಮಿ ಪಾರ್ಟಿಯಲ್ಲೀಗ ಎಲ್ಲವೂ ಸರಿಯಾಗಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.

ಪಕ್ಷದ ಕಾರ್ಯಕಾರಿಣಿಯಿಂದ ಸಂಸ್ಥಾಪಕ ಮುಖಂಡರಾಗಿದ್ದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಉಚ್ಚಾಟನೆ ಮಾಡಿದ ಬಳಿಕ ಮೊದಲ ಬಾರಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ‘ಪಕ್ಷ ಈಗ ಸರಿಯಾಗಿ ನಡೆಯುತ್ತಿದೆ’ ಎಂದು ಹೇಳುವ ಮೂಲಕ ಪಕ್ಷದ ಆಂತರಿಕ ಬಿಕ್ಕಟ್ಟು ನಿವಾರಿಸುವಲ್ಲಿ ತಾವು ಕೈಗೊಂಡ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಇಬ್ಬರು ಮುಖಂಡರನ್ನು ಶನಿವಾರವಷ್ಟೇ ಕಾರ್ಯಕಾರಿಣಿಯಿಂದ ಹಾಗೂ ಭಾನುವಾರ ಆಂತರಿಕ ಶಿಸ್ತುಪಾಲನ ಸಮಿತಿಯಿಂದ ಭೂಷಣ್ ಅವರನ್ನು, ಆಂತರಿಕ ಲೋಕಪಾಲ ಸಮಿತಿಯಿಂದ ಅಡ್ಮಿರಲ್ ರಾಮದಾಸ್ ಅವರನ್ನು ವಜಾಗೊಳಿಸಲಾಗಿದೆ. ಈ ಎಲ್ಲ ಬೆಳವಣಿಗೆಯನ್ನು ‘ಪಕ್ಷ ಈಗ ಸರಿಯಾಗಿ ನಡೆಯುತ್ತಿದೆ’ ಎಂದಷ್ಟೇ ಹೇಳುವ ಮೂಲಕ ಕೇಜ್ರಿವಾಲ್, ಪಕ್ಷದೊಳಗಿದ್ದುಕೊಂಡೇ ಪಕ್ಷ ವಿರೋಧಿ ಕಾರ್ಯ ಕೈಗೊಂಡವನ್ನು ಹೊರ ಹಾಕಿದ ನಂತರದ ಪಕ್ಷದೊಳಗಿನ ಸ್ಥಿತಿ-ಗತಿಯನ್ನು ಸೂಚ್ಯವಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.