ಪಠಾಣ್ಕೋಟ್: ಪಂಜಾಬ್ನ ಮಮೂನ್ ಸೇನಾ ನೆಲೆ ಬಳಿ ಅನುಮಾನಾಸ್ಪದ ಚೀಲಗಳು ಪತ್ತೆಯಾದ ಕಾರಣ ಪಠಾಣ್ಕೋಟ್ ಹಾಗೂ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ.
ಸ್ಥಳೀಯ ವ್ಯಕ್ತಿಯೊಬ್ಬರು ಚೀಲದ ಬಗ್ಗೆ ಮಾಹಿತಿ ನೀಡಿದಾಗ ಪಠಾಣ್ಕೋಟ್ ಹಾಗೂ ಮಮೂನ್ ಸುತ್ತಮುತ್ತ ಭಾರತೀಯ ಸೇನೆ ಶೋಧ ಕಾರ್ಯಚರಣೆ ಕೈಗೊಂಡಿತು. ಈ ವೇಳೆ ಗೋಣಿಚೀಲ ಸಿಕ್ಕಿದ್ದು ಅದರಲ್ಲಿ ಐದು ಶರ್ಟ್ ಹಾಗೂ 2 ಪ್ಯಾಂಟ್ಗಳಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.
2015ರಲ್ಲಿ ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ್ದ ಮೂವರು ಶಸ್ತ್ರಧಾರಿಗಳು ಒಬ್ಬ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 7 ಮಂದಿಯನ್ನು ಹತ್ಯೆಗೈದಿದ್ದರು.