ADVERTISEMENT

ಪಾಕಿಸ್ತಾನದಲ್ಲಿರುವ ಮಗಳನ್ನು ಭಾರತಕ್ಕೆ ಕರೆತರುವಂತೆ ಸುಷ್ಮಾ ಸ್ವರಾಜ್‌ಗೆ ಮನವಿ ಮಾಡಿದ ಹೈದರಾಬಾದ್‌ ದಂಪತಿ

ಏಜೆನ್ಸೀಸ್
Published 29 ಮೇ 2017, 9:48 IST
Last Updated 29 ಮೇ 2017, 9:48 IST
ಪಾಕಿಸ್ತಾನದಲ್ಲಿರುವ ಮಗಳನ್ನು ಭಾರತಕ್ಕೆ ಕರೆತರುವಂತೆ ಸುಷ್ಮಾ ಸ್ವರಾಜ್‌ಗೆ ಮನವಿ ಮಾಡಿದ ಹೈದರಾಬಾದ್‌ ದಂಪತಿ
ಪಾಕಿಸ್ತಾನದಲ್ಲಿರುವ ಮಗಳನ್ನು ಭಾರತಕ್ಕೆ ಕರೆತರುವಂತೆ ಸುಷ್ಮಾ ಸ್ವರಾಜ್‌ಗೆ ಮನವಿ ಮಾಡಿದ ಹೈದರಾಬಾದ್‌ ದಂಪತಿ   
ನವದೆಹಲಿ: ಬಲಾತ್ಕಾರವಾಗಿ ಮದುವೆ ಆಗಿದ್ದ ಪಾಕಿಸ್ತಾನದ ಪ್ರಜೆಯ ಹಿಡಿತದಿಂದ ಭಾರತದ ಯುವತಿ ಉಜ್ಮಾ ಅಹಮದ್ ಅವರನ್ನು ರಕ್ಷಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಪಾಕಿಸ್ತಾನದಲ್ಲಿರುವ ಮತ್ತೊಬ್ಬ ಭಾರತದ ಯುವತಿಯನ್ನು ಕರೆತರುವ ಜವಾಬ್ದಾರಿ ಹೆಗಲೇರಿದೆ.
 
ಕಳೆದ ಒಂಭತ್ತು ವರ್ಷಗಳಿಂದ ಪಾಕಿಸ್ತಾನದಲ್ಲಿರುವ ಮಗಳಾದ ಮಹಮ್ಮದೀ ಬೇಗಮ್ ಅವರನ್ನು ಕರೆತರುವಂತೆ ಹೈದರಾಬಾದ್ ದಂಪತಿ ಸುಷ್ಮಾ ಸ್ವರಾಜ್ ಅವರ ಮೊರೆ ಹೋಗಿದ್ದಾರೆ. 
 
‘ನನ್ನ ಮಗಳು ಮಹಮ್ಮದೀ ಬೇಗಮ್ ಕಳೆದ 9 ವರ್ಷಗಳಿಂದ ಪಾಕಿಸ್ತಾನದಲ್ಲಿ ಸಿಲುಕಿದ್ದಾಳೆ. ಅವಳಿಗಾಗಿ ನಾವು ಕಾಯುತ್ತಿದ್ದೇವೆ. ಹಲವು ವರ್ಷಗಳಿಂದ ಅವಳು ಭಾರತಕ್ಕೆ ಬಂದಿಲ್ಲ. ಈ ಬಾರಿಯ ರಾಮಧಾನ್ ಸಂಭ್ರಮವನ್ನು ನನ್ನ ಮಗಳೊಂದಿಗೆ ಕಳೆಯಬೇಕೆಂದು ಕೊಂಡಿದ್ದೇವೆ. 
 
ಪಾಕಿಸ್ತಾನ ಮೊಹಮ್ಮದ್ ಯೂನಸ್ ಎಂಬಾತ ನನ್ನ ಮಗಳು ಮಹಮ್ಮದೀ ಬೇಗಮ್ ಓಮನ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಆಕೆಗೆ ಮೋಸ ಮಾಡಿ ಮದುವೆಯಾಗಿ ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಿದ್ದಾನೆ.
 
ಅಲ್ಲಿ ಆತ ನನ್ನ ಮಗಳಿಗೆ ಹಿಂಸೆ ನೀಡುತ್ತಿದ್ದು, ಆಕೆಯನ್ನು ಕೆಲಸದಾಕೆಯಂತೆ ನಡೆಸಿಕೊಳ್ಳುತ್ತಿದ್ದಾರೆ. ಆಕೆ ನನ್ನನ್ನು ಭಾರತಕ್ಕೆ ಕರೆಸಿಕೊಳ್ಳಿ ಎಂದು ಕರೆ ಮಾಡುತ್ತಿದ್ದಾಳೆ.
 
ಸುಷ್ಮಾ ಸ್ವರಾಜ್ ಅವರೇ, ಸರ್ಕಾರದ ನೆರವಿನಿಂದ ಉಜ್ಮಾ ಅವರನ್ನು ಭಾರತಕ್ಕೆ ಮರಳುವಂತೆ ಮಾಡಿದ್ದೀರಿ. ನನ್ನ ಮಗಳಾದ ಬೇಗಮ್‌ನನ್ನು ಸಹ ಕಾಪಾಡಿ ಎಂದು ಮಹಮ್ಮದೀ ಬೇಗಮ್ ಅವರ ತಂದೆ ಮಹಮ್ಮದ್ ಅಕ್ಬರ್ ಅವರು ಕೇಳಿಕೊಂಡಿದ್ದಾರೆ. 
 
ಇಸ್ಲಾಮಾಬಾದ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿ ಮಹಮ್ಮದೀ ಬೇಗಮ್ ಅವರನ್ನು ಭಾರತಕ್ಕೆ ಆದಷ್ಟು ಬೇಗ ಕಳುಹಿಸುವುದಾಗಿ ಭರವಸೆ ನೀಡಿದೆ ಎಂದು ಅಕ್ಬರ್ ಹೇಳಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.