ADVERTISEMENT

ಪಿ.ಎಂ ಆದ ಸಿ.ಎಂ: ಮೋದಿ ಎರಡನೆಯವರು

​ಪ್ರಜಾವಾಣಿ ವಾರ್ತೆ
Published 21 ಮೇ 2014, 19:30 IST
Last Updated 21 ಮೇ 2014, 19:30 IST

ಬೆಂಗಳೂರು: ರಾಜ್ಯವೊಂದರ ಮುಖ್ಯಮಂತ್ರಿ ಹುದ್ದೆ­ಯಲ್ಲಿ ಇದ್ದಾಗಲೇ ಪ್ರಧಾನಿಯಾಗಿ ಆಯ್ಕೆಯಾದ ಎರಡನೆಯವರು ನರೇಂದ್ರ ಮೋದಿ.
ಮೊದಲನೆಯವರು ಎಚ್‌.ಡಿ. ದೇವೇಗೌಡ. 1996ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ­ದ್ದಾಗಲೇ ಅವರಿಗೆ  ಸಂಯುಕ್ತರಂಗ ಸರ್ಕಾರದ ಪ್ರಧಾನಿ ಹುದ್ದೆ ಒಲಿದಿತ್ತು.

ಕಾಂಗ್ರೆಸ್‌ನ ಬಾಹ್ಯ ಬೆಂಬಲದಿಂದ ದೇವೇಗೌಡರು ಪ್ರಧಾನಿಯಾಗಿ­ದ್ದರು. ಸತತ ಮೂರು ಅವಧಿಗೆ ಗುಜರಾತ್‌ ಮುಖ್ಯ­ಮಂತ್ರಿಯಾಗಿದ್ದ ಬಿಜೆಪಿಯ ನರೇಂದ್ರ ಮೋದಿ ಈಗ ಕಾಂಗ್ರೆಸ್ಸನ್ನು ಸೋಲಿಸಿ ನಿಚ್ಚಳ ಬಹುಮತದೊಂದಿಗೆ ಪ್ರಧಾನಿಯಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.