ADVERTISEMENT

ಪೊಯಸ್‌ ಗಾರ್ಡನ್‌ ನನಗೆ ಸೇರಿದ್ದು: ದೀಪಾ ಹಕ್ಕು ಮಂಡನೆ

​ಪ್ರಜಾವಾಣಿ ವಾರ್ತೆ
Published 26 ಮೇ 2017, 20:08 IST
Last Updated 26 ಮೇ 2017, 20:08 IST

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ  ನಿವಾಸ ‘ಪೊಯಸ್‌ ಗಾರ್ಡನ್‌’ ನನಗೆ ಹಾಗೂ ಸಹೋದರ ದೀಪಕ್‌ಗೆ ಸೇರಿದ್ದು ಎಂದು ಆಕೆಯ ಸಂಬಂಧಿ ದೀಪಾ ಹಕ್ಕು  ಮಂಡಿಸಿದ್ದಾರೆ.

ಎಐಎಡಿಎಂಕೆ ಜಗಳದ ನಂತರ ದೀಪಾ ಅವರು ‘ಅಮ್ಮಾ ದೀಪಾ ಪೆರ್‌ವಾಯಿ’ ಹೆಸರಿನ ಹೊಸ ಪಕ್ಷ ಸ್ಥಾಪಿಸಿದ್ದರು. ಇದರಿಂದ ನನ್ನ ವಿರುದ್ಧ  ಸೇಡು ತೀರಿಸಿಕೊಳ್ಳಲು ರಾಜ್ಯ ಸರ್ಕಾರವು ಮನೆಯನ್ನು ‘ಸ್ಮಾರಕ ಭವನ’ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಅವರ ಎಲ್ಲ ಆಸ್ತಿಗಳಿಗೂ ರಕ್ತಸಂಬಂಧಿಗಳಾದ ನಾನು ಮತ್ತು ಸಹೋದರ ಅಧಿಕೃತ ಹಕ್ಕುದಾರರು. ಅದನ್ನು ಸ್ಮಾರಕವನ್ನಾಗಿ ಮಾಡು ವುದು ಕಾನೂನಿಗೆ ವಿರುದ್ಧವಾದುದು’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.