ADVERTISEMENT

ಪೌರತ್ವ: ಪಾಕ್‌ ಹಿಂದೂಗಳ ಅರ್ಜಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST

ಅಹಮದಾಬಾದ್‌ (ಪಿಟಿಐ):  ಪಾಕಿ­ಸ್ತಾನ­ದಿಂದ ವಲಸೆ ಬಂದು ಕೆಲ ವರ್ಷ­ಗಳಿಂದ ಗುಜರಾತ್‌ನಲ್ಲಿ ನೆಲೆಸಿ­ರುವ 400ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ಭಾರತೀಯ ಪೌರತ್ವ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿವೆ.

ಪಾಕಿಸ್ತಾನ ವಲಸಿಗರ ಬೇಡಿಕೆ ಮೇರೆಗೆ ಕೇಂದ್ರ ಗೃಹ ಸಚಿವಾಲಯ ಹಾಗೂ ಜಿಲ್ಲಾಡಳಿತ ಜಂಟಿಯಾಗಿ  ಎರಡು ದಿನಗಳ ಶಿಬಿರ ಆಯೋಜಿಸಿತ್ತು. ಭಾರತೀಯ ಪೌರತ್ವ ಕೋರಿ ಅರ್ಜಿ ಸಲ್ಲಿಸಿದವರಲ್ಲಿ ಪಾಕಿಸ್ತಾನದ ಎರಡು ಮುಸ್ಲಿಂ ಕುಟುಂಬ­ದವರು ಹಾಗೂ 28 ಅಲ್ಪಸಂಖ್ಯಾ­ತ ಸಮುದಾಯದವರು ಸೇರಿದ್ದಾರೆ. ಈ ಪೈಕಿ  ಕೆಲವು ಅರ್ಜಿಗಳನ್ನು ಮಾತ್ರ ಪೌರತ್ವ­ಕ್ಕಾಗಿ ಪರಿಗಣಿಸಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.