ADVERTISEMENT

ಪ್ರಧಾನಿ ನರೇಂದ್ರ ಮೋದಿಗೆ ಬರಾಕ್ ಒಬಾಮ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 26 ಮೇ 2014, 19:47 IST
Last Updated 26 ಮೇ 2014, 19:47 IST

ವಾಷಿಂಗ್ಟನ್ (ಪಿಟಿಐ): ಭಾರತದ 15ನೇ ಪ್ರಧಾನಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಅಮೆರಿಕದ ಅಧ್ಯಕ್ಷ ಒಬಾಮ ಅವರು ಅಭಿನಂದಿ­ಸಿದ್ದಾರೆ.

ದೂರವಾಣಿ ಕರೆ ಮೂಲಕ ಒಬಾಮ ಅವರು ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೇ ಕಾರ್ನಿ ತಿಳಿಸಿದ್ದಾರೆ.

ಮೋದಿ ನಾಯಕತ್ವದಲ್ಲಿ ಅಮೆರಿಕ–ಭಾರತದ ಸಹಭಾಗಿತ್ವವನ್ನು ಬಲಪಡಿ­ಸುವ ಬಗ್ಗೆ  ಹಾಗೂ ಸಂಬಂಧ ವೃದ್ಧಿ ಬಗ್ಗೆ ಅಮೆರಿಕ ನಿರೀಕ್ಷೆ ಹೊಂದಿದೆ’ ಎಂದು ಕಾರ್ನೆ ಹೇಳಿದ್ದಾರೆ.

ADVERTISEMENT

ಸೋಮವಾರ ಮಧ್ಯರಾತ್ರಿ ವರೆಗೂ ಸಚಿವರ ಖಾತೆಗಳು ಹಂಚಿಕೆ ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.