ADVERTISEMENT

ಪ್ರಧಾನಿ ಮೋದಿಗೆ 43 ಪತ್ರ ಬರೆದಿದ್ದೆ, ಉತ್ತರ ನೀಡಿಲ್ಲ: ಅಣ್ಣಾ ಹಜಾರೆ

ಏಜೆನ್ಸೀಸ್
Published 24 ಮಾರ್ಚ್ 2018, 9:07 IST
Last Updated 24 ಮಾರ್ಚ್ 2018, 9:07 IST
ಅಣ್ಣಾ ಹಜಾರೆ (ಸಂಗ್ರಹ ಚಿತ್ರ)
ಅಣ್ಣಾ ಹಜಾರೆ (ಸಂಗ್ರಹ ಚಿತ್ರ)   

ನವದೆಹಲಿ: ಲೋಕಪಾಲರ ನೇಮಕ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 43 ಪತ್ರಗಳನ್ನು ಬರೆದಿದ್ದೆ. ಆದರೆ, ಅವರು ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ ಇಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಬೇಕಾಯಿತು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದರು.

ಲೋಕಪಾಲರ ನೇಮಕಕ್ಕೆ ಆಗ್ರಹಿಸಿ ಅಣ್ಣಾ ಹಜಾರೆ ಶುಕ್ರವಾರದಿಂದ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮತ್ತು ಮಹಾರಾಷ್ಟ್ರ ಸರ್ಕಾರದ ಕೆಲವು ಸಚಿವರು ಗುರವಾರ ತಮ್ಮನ್ನು ಭೇಟಿಯಾಗಿ ಕೆಲವು ಭರವಸೆಗಳನ್ನು ನೀಡಿದ್ದಾರೆ. ಆದರೆ, ಅವುಗಳನ್ನು ನಂಬುವುದಿಲ್ಲ ಎಂದು ಹಜಾರೆ ಹೇಳಿದರು.

ADVERTISEMENT

‘ನಿಮ್ಮ ಬೇಡಿಕೆ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಅವರು (ಸಚಿವರು) ಭರವಸೆ ನಿಡಿದರು. ಆದರೆ, ನಿಮ್ಮನ್ನು ನಾನು ನಂಬುವುದಿಲ್ಲ. ಇದುವರೆಗೆ ಎಷ್ಟು ಭರವಸೆಗಳನ್ನು ನೀವು ಈಡೇರಿಸಿದ್ದೀರಿ ಎಂದು ಅವರನ್ನೇ ಪ್ರಶ್ನಿಸಿದೆ’ ಎಂದು ಹಜಾರೆ ತಿಳಿಸಿದರು.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.