ಕೋಲ್ಕತ್ತ (ಪಿಟಿಐ): ಭಾರತದಲ್ಲಿ ಕಳೆದ ದಶಕಗಳಿಂದ ಬಾಲ್ಯವಿವಾಹ ಪ್ರಕರಣಗಳು ಇಳಿಮುಖವಾಗಿದ್ದರೂ ಸಂಪೂರ್ಣವಾಗಿ ನಿರ್ಮೂಲನೆಯಾಗಲು 50 ವರ್ಷಗಳೇ ಬೇಕಾಗಬಹುದು ಎಂದು ಯುನಿಸೆಫ್ ಹೇಳಿದೆ.
‘ಬಾಲ್ಯವಿವಾಹ ವರ್ಷಕ್ಕೆ ಶೇ ಒಂದರಷ್ಟು ಇಳಿಮುಖವಾಗುತ್ತಿದೆ. ಆದರೆ ಇಷ್ಟು ಮಂದಗತಿಯಲ್ಲಿ ಸಾಗಿದರೆ ಬಾಲ್ಯವಿವಾಹ ಸಂಪೂರ್ಣ ನಿರ್ಮೂಲನೆಗೆ ಇನ್ನೂ 50 ವರ್ಷಗಳೇ ಬೇಕು. ಅಷ್ಟು ಹೊತ್ತಿಗೆ ಕೋಟ್ಯಂತರ ಹೆಣ್ಣುಮಕ್ಕಳ ಮದುವೆ ಎಳೆಪ್ರಾಯದಲ್ಲೇ ನಡೆದಿರುತ್ತದೆ’ ಎಂದು ಭಾರತದಲ್ಲಿನ ಯುನಿಸೆಫ್ ಮಕ್ಕಳ ರಕ್ಷಣಾ ತಜ್ಞೆ ಡೋರಾ ಗಿಸ್ಟಿ ಎಚ್ಚರಿಸಿದ್ದಾರೆ.
ಇಪ್ಪತ್ತರಿಂದ 24 ವರ್ಷದೊಳಗಿನ ವಿವಾಹಿತ ಮಹಿಳೆಯರೊಂದಿಗೆ ನಡೆಸಿದ ಅಧ್ಯಯನದಲ್ಲಿ ಅವರಲ್ಲಿ ಶೇ 43 ಮಂದಿ 18 ವರ್ಷಕ್ಕೂ ಮೊದಲೇ ಅಂದರೆ ಎಳೆವಯಸ್ಸಿನಲ್ಲೇ ಮದುವೆಯಾಗಿರುವುದು ತಿಳಿದುಬಂದಿದೆ ಎಂದು ಡೋರಾ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.