ADVERTISEMENT

ಬಿಜೆಪಿ ಮೈತ್ರಿಕೂಟಕ್ಕೆ 154 ಸ್ಥಾನ

ಮಹಾರಾಷ್ಟ್ರದಲ್ಲಿ ‘ದ ವೀಕ್‌’–ಹಂಸ ರಿಸರ್ಚ್‌ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2014, 19:30 IST
Last Updated 9 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಮಹಾರಾಷ್ಟ್ರ­ದಲ್ಲಿ ಇದೇ 15ರಂದು  ನಡೆಯ­ಲಿರುವ ವಿಧಾನಸಭಾ ಚುನಾ­ವಣೆ­ಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 288 ರಲ್ಲಿ 154 ಸ್ಥಾನಗಳು ಲಭಿಸಲಿವೆ.  ಮುಖ್ಯ­ಮಂತ್ರಿ ಸ್ಥಾನದ ವಿಷಯಕ್ಕೆ ಬಂದಾಗ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅತಿ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ. 

‘ದ ವೀಕ್‌’ ಮತ್ತು ಹಂಸ ರಿಸರ್ಚ್‌ ನಡೆಸಿದ ಚುನಾವಣಾ ಪೂರ್ವ ಸಮೀ­ಕ್ಷೆ­­ಯಲ್ಲಿ ಈ ವಿವರ ತಿಳಿದು ಬಂದಿದೆ. ಹಿಂದಿನ ಮುಖ್ಯಮಂತ್ರಿ ಪೃಥ್ವಿರಾಜ್‌ ಸಿ.ಎಂ ಆಯ್ಕೆಗೆ ಎರಡನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್‌ ಪಕ್ಷ ಕನಿಷ್ಠ 25 ಕ್ಷೇತ್ರಗಳಲ್ಲಿ ಜಯಿಸಲಿದೆ.

ಶರದ್‌ ಪವಾರ್ ಅವರ ಎನ್‌ಸಿಪಿ ಕೇವಲ ಶೇ 5.85 ಮತ ಪಡೆದು 17 ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ಶೇಕಡಾವಾರು ಮತ ಪ್ರಮಾಣದಲ್ಲಿ ಬಿಜೆಪಿ ಇತರ ಪಕ್ಷಗಳಿಗಿಂತ ಬಹಳ ಮುಂದಿದೆ. ಬಿಜೆಪಿ ಶೇ 36.50, ಶಿವಸೇನಾ ಶೇ 17.10 ಮತ್ತು ಕಾಂಗ್ರೆಸ್‌್ ಶೇ 11.97ರಷ್ಟು ಮತ ಪಡೆಯಲಿವೆ.

ಮುಖ್ಯಮಂತ್ರಿ ಹುದ್ದೆಗೆ ಜನರ ನೆಚ್ಚಿನ ಅಭ್ಯರ್ಥಿ ಸಮೀಕ್ಷೆಯಲ್ಲಿ ಶರದ್‌ ಪವಾರ್‌ ಅವರು ಎಂಎನ್ಎಸ್‌ ಮುಖಂಡ ರಾಜ್‌ ಠಾಕ್ರೆ ಮತ್ತು ಬಿಜೆಪಿಯ ದೇವೆಂದರ್‌ ಫಡ್ನವಿಸ್‌್ ನಂತರದ ಐದನೇ ಸ್ಥಾನದಲ್ಲಿದ್ದಾರೆ.

ಶಿವಸೇನಾ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು 47 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ‘ಎಂಎನ್‌ಎಸ್‌’ಗೆ 10 ಕ್ಷೇತ್ರಗಳಲ್ಲಿ  ಜಯ ದೊರೆಯಲಿದೆ. ಪಕ್ಷೇತರ ಅಭ್ಯರ್ಥಿಗಳು ಶೇ 4.71 ಮತ ಪಡೆದು 20ಸ್ಥಾನ ಗೆಲ್ಲಲಿದ್ದರೆ ಇತರ ಪಕ್ಷಗಳು ಶೇ 6.79 ಮತ ಪಡೆದು 15 ಕಡೆ ಜಯಶೀಲರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT