ADVERTISEMENT

ಬಿಯಾಸ್ ದುರಂತ: ಮುಂದುವರಿದ ಶೋಧ

​ಪ್ರಜಾವಾಣಿ ವಾರ್ತೆ
Published 10 ಜೂನ್ 2014, 13:23 IST
Last Updated 10 ಜೂನ್ 2014, 13:23 IST

ಮಂಡಿ(ಹಿಮಾಚಲ ಪ್ರದೇಶ)(ಐಎಎನ್‌ಎಸ್): ಹಿಮಾಚಲ ಪ್ರದೇಶದ ಥಾಲೋಟ್ ಸಮೀಪ ಬಿಯಾಸ್ ನದಿಯಲ್ಲಿ ಕೊಚ್ಚಿಹೋದ ಹೈದರಾಬಾದಿನ ಎಂಜಿನಿಯರಿಂಗ್ ಕಾಲೇಜಿನ 24 ವಿದ್ಯಾರ್ಥಿಗಳಲ್ಲಿ ಇನ್ನೂ 19 ವಿದ್ಯಾರ್ಥಿಗಳ ಶವಗಳ ಪತ್ತೆಗಾಗಿ ಮಂಗಳವಾರವೂ ಶೋಧಕಾರ್ಯ ಮುಂದುವರಿದಿದೆ.

ವಿದ್ಯಾರ್ಥಿಗಳ ಶವಪತ್ತೆಗಾಗಿ ಥಾಲೋಟ್‌ದಿಂದ ಪಾಂಡೋಹ್ ಅಣೆಕಟ್ಟಿನವರೆಗೆ ಎನ್‌ಡಿಆರ್‌ಎಫ್ ಮತ್ತು ಭಾರತೀಯ ಸೇನೆ ತೀವ್ರ ಹುಡುಕಾಟ ನಡೆಸುತ್ತಿದೆ.

ವಿದ್ಯಾರ್ಥಿಗಳು ಬದುಕುಳಿದಿರುವ ಯಾವುದೇ ಸಾಧ್ಯತೆ ಇಲ್ಲ ಎಂದು ಎನ್‌ಡಿಆರ್‌ಎಫ್ ಅಧಿಕಾರಿ ಜೈದೀಪ್ ಸಿಂಗ್ ತಿಳಿಸಿದರು.

ಶೋಧ ಕಾರ್ಯದಲ್ಲಿ 10 ಮಂದಿ ಈಜುಗಾರರನ್ನು ಒಳಗೊಂಡ ಒಟ್ಟು 84 ಜನರ ತಂಡ ಕಾರ್ಯನಿರತವಾಗಿದೆ.

24 ವಿದ್ಯಾರ್ಥಿಗಳ ಪೈಕಿ ಐವರ ಮೃತದೇಹಗಳನ್ನು ರಕ್ಷಣಾ ತಂಡ ಸೋಮವಾರ ಹುಡುಕಿ ತೆಗೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.