ADVERTISEMENT

ಬುರ್ದ್ವಾನ್‌ ಸ್ಫೋಟ: ಮತ್ತೊಬ್ಬ ಶಂಕಿತನ ಸೆರೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2014, 8:43 IST
Last Updated 18 ನವೆಂಬರ್ 2014, 8:43 IST

ನವದೆಹಲಿ (ಪಿಟಿಐ): ಪಶ್ಚಿಮಬಂಗಾಳದ ಬುರ್ದ್ವಾನ್‌ನಲ್ಲಿ  ಕಳೆದ ತಿಂಗಳು ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಭಯೋತ್ಪಾದಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೈದರಾಬಾದ್‌ನಲ್ಲಿ ವಶಕ್ಕೆ ಪಡೆದಿದೆ.

ಖಲೀದ್‌ ಅಲಿಯಾಸ್‌ ಖಾಲಿದ್‌ ಮಹಮ್ಮದ್‌ ಹೈದರಾಬಾದ್‌ನಲ್ಲಿ ತಲೆ ಮರೆಸಿಕೊಂಡಿದ್ದ. ಈತನನ್ನು ಆಂಧ್ರ ಪೋಲಿಸರು ನವೆಂಬರ್‌ 16ರಂದು  ವಶಕ್ಕೆ -ಪಡೆದು ನಂತರ ‘ಎನ್‌ಐಎ’ಗೆ ಹಸ್ತಾಂತರಿಸಿದ್ದಾರೆ.

ಮ್ಯಾನ್ಮಾರ್‌ ಮೂಲದ ಈತ ಪಾಕಿಸ್ತಾನ ಮೂಲದ ತೆಹ್ರಿಕ್‌ ತಾಲಿಬಾನ್‌ ಭಯೋತ್ಪಾದಕ ಸಂಘಟನೆಯಿಂದ ತರಬೇತಿ ಪಡೆದಿದ್ದ ಎನ್ನಲಾಗಿದೆ.  ಸ್ಫೋಟಕಗಳನ್ನು ತಯಾರಿಸುವಲ್ಲಿ ಈತ ಪರಿಣಿತಿ ಪಡೆದಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಖಲೀದ್‌ ಸೇರಿದಂತೆ ಬುರ್ದ್ವಾನ್  ಸ್ಪೋಟಕ್ಕೆ ಸಂಬಂಧಿಸಿ ಈಗಾಗಲೇ 7 ಮಂದಿಯನ್ನು ‘ಎನ್‌ಐಎ’ ವಶಕ್ಕೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT