ADVERTISEMENT

ಭಾರತದ ಡಿಎನ್‌ಎದಲ್ಲೇ ಸಹಿಷ್ಣುತೆ ಇದೆ: ನಕ್ವಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 6:32 IST
Last Updated 25 ನವೆಂಬರ್ 2015, 6:32 IST

ನವದೆಹಲಿ (ಪಿಟಿಐ): ದೇಶದಾದ್ಯಂತ ನಡೆಯುತ್ತಿರುವ ‘ಅಸಹಿಷ್ಣುತೆ’ ಕುರಿತು ಚರ್ಚೆಗೆ ಮತ್ತಷ್ಟು ಗ್ರಾಸ ಒದಗಿಸಿರುವ ಬಾಲಿವುಡ್ ನಟ ಅಮೀರ್ ಖಾನ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ,  ‘ಭಾರತದ ಡಿಎನ್‌ಎದಲ್ಲಿಯೇ (ವಂಶವಾಹಿ) ಸಹಿಷ್ಣುತೆ ಇದೆ’ ಎಂದಿದ್ದಾರೆ.

‘ಭಾರತದ ಡಿಎನ್‌ಎದಲ್ಲಿಯೇ ಸಹಿಷ್ಣುತೆ ಇದ್ದು, ದೇಶದಲ್ಲಿ ಅಸಹಿಷ್ಣುತೆಗೆ ಜಾಗವಿಲ್ಲ. ಜನರು ಕೃತ್ರಿಮ ರಾಜಕೀಯದ ಪ್ರಭಾವಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಕೇಂದ್ರ ಸಚಿವ ನಕ್ವಿ ಅವರು ಟ್ವೀಟ್ ಮಾಡಿದ್ದಾರೆ.

‘ದೇಶದಲ್ಲಿ ಶಾಂತಿ ಹಾಗೂ ಸಾಮರಸ್ಯ ಚಾಲ್ತಿಯಲ್ಲಿವೆ ಎಂಬುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಅಮೀರ್ ಅವರು ದೇಶ ಬಿಡುವ ಅಗತ್ಯವಿಲ್ಲ. ಕೃತ್ರಿಮ ರಾಜಕೀಯ ಪ್ರಭಾವಕ್ಕೆ ಅವರು ಒಳಗಾಗಬಾರದು’ ಎಂದೂ ಅವರು ಬರೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.