ನವದೆಹಲಿ (ಪಿಟಿಐ): ಮೊಬೈಲ್ ಅಂತರ್ಜಾಲ ಸಂಪರ್ಕದ ವೇಗ ಕಡಿಮೆ ಇದ್ದರೂ ತ್ವರಿತವಾಗಿ ಮಾಹಿತಿ ಶೋಧ ನಡೆಸುವುದು ಸಾಧ್ಯವಾಗುವಂತಹ ಹೊಸ ವ್ಯವಸ್ಥೆಯನ್ನು ಸಿದ್ಧಪಡಿಸಲು ‘ಗೂಗಲ್’ ಮುಂದಾಗಿದೆ. ಬಳಕೆದಾರರು ನಿಧಾನಗತಿಯ ಅಂತರ್ಜಾಲ ಸಂಪರ್ಕ ಹೊಂದಿದ್ದಾರೆಯೇ ಎಂಬುದನ್ನು ಗೂಗಲ್ ಸ್ವಯಂಚಾಲಿತವಾಗಿಯೇ ಗುರುತಿಸಿ ಅಂಥವರಿಗಾಗಿ ವೇಗವಾಗಿ ಶೋಧ ನಡೆಸುವಂತಹ ಆವೃತ್ತಿಯನ್ನು ರವಾನಿಸುತ್ತದೆ.
ಬಳಕೆದಾರರು ಹುಡುಕುವ ಮಾಹಿತಿಯ ಬೈಟ್ಗಳನ್ನು ಕಡಿಮೆ ಮಾಡುವ ಮೂಲಕ ವೇಗವಾಗಿ, ಕಡಿಮೆ ಖರ್ಚಿನಲ್ಲಿ ಸೇವೆ ಒದಗಿಸುವುದು ಇದರ ಉದ್ದೇಶ ಎಂದು ಗೂಗಲ್ನ ಎಂಜಿನಿಯರ್ ಭರತ್ ಮೆದಿರತ್ತಾ ತಿಳಿಸಿದ್ದಾರೆ.
‘ಗೂಗಲ್ನ ಉನ್ನತ ಗುಣಮಟ್ಟದ ಶೋಧ ಫಲಿತಾಂಶದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಆದರೆ ನಕ್ಷೆಗಳು ಮತ್ತು ಚಿತ್ರಗಳು ಅತ್ಯಂತ ಅಗತ್ಯವಾಗಿದ್ದರೆ ಮಾತ್ರ ಕಾಣಿಸಿಕೊಳ್ಳುತ್ತವೆ’ ಎಂದು ಭರತ್ ಮಾಹಿತಿ ನೀಡಿದ್ದಾರೆ. ಕಡಿಮೆ ವೇಗದ ಅಂತರ್ಜಾಲ ಸಂಪರ್ಕ ಹೊಂದಿರುವವರಿಗೂ ಮಾಹಿತಿ ಸುಲಭದಲ್ಲಿ ದೊರೆಯಬೇಕೆಂಬುದು ಉದ್ದೇಶ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.