ADVERTISEMENT

ಮತ್ತೆ ದಾಳಿ ಭೀತಿ: ಕಾಶ್ಮೀರದಲ್ಲಿ ಕಟ್ಟೆಚ್ಚರ

ಪಿಟಿಐ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಮತ್ತೆ ದಾಳಿ ಭೀತಿ: ಕಾಶ್ಮೀರದಲ್ಲಿ ಕಟ್ಟೆಚ್ಚರ
ಮತ್ತೆ ದಾಳಿ ಭೀತಿ: ಕಾಶ್ಮೀರದಲ್ಲಿ ಕಟ್ಟೆಚ್ಚರ   

ನವದೆಹಲಿ : ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆದು ಒಂದು ವರ್ಷ ಪೂರ್ಣಗೊಂಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರರ ಚಟುವಟಿಕೆ ಹೆಚ್ಚಾಗಿದ್ದು ಸೇನಾ ನೆಲೆಗಳ ಮೇಲೆ ಮತ್ತೊಂದು ದಾಳಿ ನಡೆಯುವ ಬಗ್ಗೆ ಸೇನೆಗೆ ಗುಪ್ತಚರ ಮಾಹಿತಿ ದೊರೆತಿದೆ.

ಹಾಗಾಗಿ ಗಸ್ತು ಮತ್ತು ಕಾವಲು ನಿರ್ವಹಿಸುತ್ತಿರುವ ಯೋಧರಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

ADVERTISEMENT

ಗಡಿ ನಿಯಂತ್ರಣ ರೇಖೆಯ ಆಚೆಗೆ ಉಗ್ರರ 17 ಶಿಬಿರಗಳಿವೆ. ಕಾಶ್ಮೀರದಲ್ಲಿ 250ಕ್ಕೂ ಹೆಚ್ಚು ಉಗ್ರರಿದ್ದಾರೆ ಎಂಬ ಮಾಹಿತಿ ಸೇನೆಗೆ ದೊರೆತಿದೆ. ಸೇನೆಯ ನಿಗಾದಲ್ಲಿಯೇ ಇದ್ದ ಜೈಷ್‌ ಎ ಮೊಹಮ್ಮದ್‌ನ ಒಂಬತ್ತು ಉಗ್ರರು ಇತ್ತೀಚೆಗೆ ಮರೆಯಾಗಿದ್ದಾರೆ. ಇದು ಸೇನೆಗೆ ಹೆಚ್ಚು ಚಿಂತೆ ಉಂಟು ಮಾಡಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಈ ಒಂಬತ್ತು ಉಗ್ರರು ಮೂರು ಗುಂಪುಗಳಾಗಿ ಕಾರ್ಯಾಚರಿಸುತ್ತಿದ್ದಾರೆ. ಇವರು ಪ್ರತ್ಯೇಕವಾಗಿ ದಾಳಿ ನಡೆಸುವ ಸಂಭವ ಇದೆ ಎಂದು ಗುಪ್ತಚರ ಮಾಹಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.