ADVERTISEMENT

ಮದ್ಯ ಮಾರಾಟ ನಿಷೇಧ: ಕೇರಳ ಹೈಕೋರ್ಟ್‌ ಅಸ್ತು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ಕೊಚ್ಚಿ/ತಿರುವಂತಪುರ (ಪಿಟಿಐ/­ಐಎ­ಎನ್‌ಎಸ್‌): ಬಾರ್‌ ಹೊಂದಿದ್ದ 700 ಸಣ್ಣ ಮತ್ತು ಮಧ್ಯಮ   ಹೋಟೆಲ್‌­ಗಳಲ್ಲಿ ಮದ್ಯ ಮಾರಾಟ ರದ್ದು ಮಾಡುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದ ನೂತನ ಮದ್ಯ ನೀತಿಯನ್ನು ಕೇರಳ ಹೈಕೋರ್ಟ್‌ ಗುರುವಾರ ಎತ್ತಿಹಿಡಿದಿದೆ.

ಆದರೆ 33 ಐಷಾರಾಮಿ ಮತ್ತು 62 ಪಾರಂಪರಿಕ ಹೋಟೆಲ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಪಂಚತಾರಾ ಹೋಟೆಲ್‌ಗಿಂತ ಕಡಿಮೆ ದರ್ಜೆಯ ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡ ಬಾರದು ಎಂದು ರಾಜ್ಯ ಸರ್ಕಾರ ನಿರ್ಧ-­ರಿಸಿದೆ. ಪಂಚತಾರಾ ಹೋಟೆಲ್‌­ಗಳಲ್ಲಿನ 20 ಬಾರ್‌ಗಳಲ್ಲಿ ಮದ್ಯ ಮಾರಾಟಕ್ಕೆ ಕೋರ್ಟ್‌ ಅನುಮತಿ ನೀಡಿದೆ.

ಹೊಸ ಮದ್ಯ ನೀತಿ ಅನ್ವಯ 2023ರ ವೇಳೆಗೆ ರಾಜ್ಯದಲ್ಲಿ ಸಂಪೂರ್ಣ ಮದ್ಯ­ನಿಷೇಧ ಮಾಡಲು ಸರ್ಕಾರ ನಿರ್ಧರಿಸಿತ್ತು.
ಬಾರ್‌ ಮಾಲೀಕರು ನೂತನ ಮದ್ಯನೀತಿ ವಿರುದ್ಧ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.