ADVERTISEMENT

ಮಹಾಭಾರತ ವಿವಾದ: ಕಮಲ್‌ ಹಾಸನ್‌ ವಿರುದ್ಧ ಸಮನ್ಸ್‌ ಜಾರಿ

ಏಜೆನ್ಸೀಸ್
Published 21 ಏಪ್ರಿಲ್ 2017, 9:47 IST
Last Updated 21 ಏಪ್ರಿಲ್ 2017, 9:47 IST
ಕಮಲ್‌ ಹಾಸನ್‌
ಕಮಲ್‌ ಹಾಸನ್‌   

ಚೆನ್ನೈ: ಮಹಾಭಾರತದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಆರೋಪದ ಬಗ್ಗೆ ನಟ ಕಮಲ್‌ ಹಾಸನ್‌ ಅವರ ವಿರುದ್ಧ ವಲ್ಲಿಯೂರ್‌ ನ್ಯಾಯಾಲಯ ಶುಕ್ರವಾರ ಸಮನ್ಸ್‌ ಜಾರಿ ಮಾಡಿದೆ.

ಕಮಲ್‌ ಹಾಸನ್‌ ಅವರು ಮೇ 5ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.

ಮಾರ್ಚ್‌ 12ರಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕಮಲ್‌, ‘ಒಬ್ಬ ಮಹಿಳೆಯನ್ನು (ದ್ರೌಪದಿ) ಜೂಜಿಗೆ ಪಣವಾಗಿಟ್ಟ ಕತೆಯಿರುವ ಪುಸ್ತಕವನ್ನು ಈ ದೇಶ ಪೂಜನೀಯ ಎಂದು ಭಾವಿಸಿದೆ’ ಎಂಬರ್ಥದ ಹೇಳಿಕೆ ನೀಡಿದ್ದರು.

ADVERTISEMENT

‘ಮಹಾಭಾರತದ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕಮಲ್‌ ಹಾಸನ್‌ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿ ಹಿಂದೂ ಮಕ್ಕಳ್‌ ಕಟ್ಚಿ ಸಂಘಟನೆಯು ಚೆನ್ನೈ ಪೊಲೀಸರಿಗೆ ದೂರು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.