ADVERTISEMENT

ಮಹಿಳಾ ಕರ್ನಲ್‌ಗೆ ಅಶ್ಲೀಲ ಚಿತ್ರ ಕಳುಹಿಸುತ್ತಿದ್ದ ಶಂಕಿತ ಐಎಸ್‌ಐ ವ್ಯಕ್ತಿಯ ಬಂಧನ

ಏಜೆನ್ಸೀಸ್
Published 19 ಸೆಪ್ಟೆಂಬರ್ 2017, 11:46 IST
Last Updated 19 ಸೆಪ್ಟೆಂಬರ್ 2017, 11:46 IST
ಮಹಿಳಾ ಕರ್ನಲ್‌ಗೆ ಅಶ್ಲೀಲ ಚಿತ್ರ ಕಳುಹಿಸುತ್ತಿದ್ದ ಶಂಕಿತ ಐಎಸ್‌ಐ ವ್ಯಕ್ತಿಯ ಬಂಧನ
ಮಹಿಳಾ ಕರ್ನಲ್‌ಗೆ ಅಶ್ಲೀಲ ಚಿತ್ರ ಕಳುಹಿಸುತ್ತಿದ್ದ ಶಂಕಿತ ಐಎಸ್‌ಐ ವ್ಯಕ್ತಿಯ ಬಂಧನ   

ನವದೆಹಲಿ: ಮಹಿಳಾ ಕರ್ನಲ್‌ ಒಬ್ಬರ ಚಿತ್ರವನ್ನು ವಿರೂಪಗೊಳಿಸಿ ಅಂತರ್ಜಾಲದಲ್ಲಿ ಹಾಕುವುದಾಗಿ ಬೆದರಿಸಿದ್ದ ಆರೋಪದ ಮೇಲೆ ಪಾಕಿಸ್ತಾನದ ಐಎಸ್‌ಐ ಜತೆ ನಂಟು ಹೊಂದಿರುವ ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಂಕಿತ ಆರೋಪಿಯನ್ನು ಮೊಹಮ್ಮದ್ ಪರ್ವೇಜ್ (30) ಎಂದು ಗುರುತಿಸಲಾಗಿದ್ನದು ಈತನನ್ನ್ನುನು ದೆಹಲಿ ಪೊಲೀಸರು ಇದೇ ತಿಂಗಳ 13ರಂದು ಬಂಧಿಸಿದ್ದರು. ಆರೋಪಿಯು ಹಲವು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಬಗ್ಗೆ ತನಿಖೆ ವೇಳೆ ಒಪ್ಪಿಕೊಂಡಿರುವುದರಿಂದ ಪ್ರಕರಣವನ್ನು ವಿಶೇಷ ಘಟಕಕ್ಕೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಅಪರಿಚಿತ ಮೊಬೈಲ್‌ ಸಂಖ್ಯೆಗಳಿಂದ ವಾಟ್ಸ್‌ ಆ್ಯಪ್ ಮೂಲಕ, ವಿರೂಪಗೊಳಿಸಲಾದ ಅಸಭ್ಯ ಚಿತ್ರಗಳು ಬರುತ್ತಿದ್ದವು. ತಮ್ಮ ಬಳಿ ಮಾತನಾಡದಿದ್ದರೆ ಈ ಚಿತ್ರಗಳನ್ನು ಅಂತರ್ಜಾಲದಲ್ಲಿ  ಪ್ರಕಟಿಸುವುದಾಗಿ ಬೆದರಿಕೆ ಸಂದೇಶವೂ ಬರುತ್ತಿತ್ತು ಎಂದು ಆ ಮಹಿಳಾ ಕರ್ನಲ್ ತಿಳಿಸಿದ್ದಾರೆ.  ನಂತರ ಅವೇ ಚಿತ್ರಗಳನ್ನು   ಕರ್ನಲ್ ಮಗಳ ಫೇಸ್‌ಬುಕ್ ಖಾತೆಗೂ ಕಳುಹಿಸಲಾಗಿತ್ತು.  ಈ ಹಿನ್ನೆಲೆಯಲ್ಲಿ ಮಹಿಳಾ ಕರ್ನಲ್  ದ್ವಾರಕಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದರ ಅನ್ವಯ ಪ್ರಕರಣ ದಾಖಲಾಗಿತ್ತು.

ADVERTISEMENT

ಆ ಎರಡು ಮೊಬೈಲ್ ಸಂಖ್ಯೆ ಹಾಗೂ ಫೇಸ್‌ಬುಕ್ ಖಾತೆಯ ವಿವರಗಳನ್ನು ಆಧರಿಸಿ ತನಿಖೆ ನಡೆಸಿದಾಗ ಪರ್ವೇಜ್‌ನನ್ನು ಬಂಧಿಸಲಾಯಿತು. ಪರ್ವೇಜ್‌ನನ್ನು ತನಿಖೆಗೆ ಒಳಪಡಿಸಿದ ಬಳಿಕ, ಈತ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಹಾಗೂ ಕೆಲವು ಪಾಕಿಸ್ತಾನಿ ಪ್ರಜೆಗಳಿಗೆ ಸಿಮ್‌ ಕಾರ್ಡ್‌ ದೊರಕುವಂತೆ ಮಾಡಿದ್ದ ಎನ್ನುವ ಅಂಶ ಬಯಲಾಯಿತು. ಈತ ಐಎಸ್‌ಐ ಜತೆ ಸಂಪರ್ಕ ಹೊಂದಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.