ADVERTISEMENT

ಮುಂಬೈ ತಲುಪಿದ ಕೊಹ್ಲಿ, ಅನುಷ್ಕಾ

ತವರಿಗೆ ಟೀಂ ಇಂಡಿಯಾ ಆಟಗಾರರು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 11:39 IST
Last Updated 28 ಮಾರ್ಚ್ 2015, 11:39 IST

ಮುಂಬೈ (ಪಿಟಿಐ): ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಡಲು ಆಸ್ಟ್ರೇಲಿಯಕ್ಕೆ ತೆರಳಿದ್ದ ನಾಯಕ ಮಹೇಂದ್ರ ಸಿಂಗ್ ದೋನಿ ಹಾಗೂ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಸೇರಿದಂತೆ ಭಾರತ ಕ್ರಿಕೆಟ್ ತಂಡ ತವರಿಗೆ ಮರಳಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ದೋನಿ ಅವರು ನವದೆಹಲಿಯಲ್ಲಿ ಇಳಿದರೆ, ಕೊಹ್ಲಿ ಅವರು ತಮ್ಮ ಗೆಳತಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಶುಕ್ರವಾರ ತಡರಾತ್ರಿ ಮುಂಬೈ ತಲುಪಿದ್ದಾರೆ.

ಕೊಹ್ಲಿ ಅವರಲ್ಲದೇ ತಂಡದ ನಿರ್ದೇಶಕ ರವಿಶಾಸ್ತ್ರಿ ಹಾಗೂ ಇತರ ಐವರು ಸದಸ್ಯರು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ADVERTISEMENT

ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ್ ಹಾಗೂ ಅಕ್ಷರ್ ಪಟೇಲ್ ಅವರು ಆಸ್ಟ್ರೇಲಿಯದಿಂದ ಮುಂಬೈಗೆ ಮರಳಿದ್ದಾರೆ.

‘ಹಿಂದೆ ಉಳಿದಿರುವ ಇತರ ಆಟಗಾರರು ಇಂದು ರಾತ್ರಿಯ ವೇಳೆಗೆ ಭಾರತಕ್ಕೆ ವಾಪಸ್ಸಾಗಲಿದ್ದಾರೆ’ ಎಂದು ಮೂಲಗಳು ಹೇಳಿವೆ.

ವಿಶ್ವಕಪ್‌ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಆತಿಥೇಯ ಆಸ್ಟ್ರೇಲಿಯದ ಎದುರು 95ರನ್‌ಗಳ ಸೋಲು ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.