ADVERTISEMENT

ಮುಂಬೈ ಮೇಯರ್ ಸ್ಪರ್ಧೆಯಿಂದ ದೂರ ಸರಿದ ಬಿಜೆಪಿ

ಪಿಟಿಐ
Published 4 ಮಾರ್ಚ್ 2017, 20:09 IST
Last Updated 4 ಮಾರ್ಚ್ 2017, 20:09 IST
ಮುಂಬೈ ಮೇಯರ್ ಸ್ಪರ್ಧೆಯಿಂದ ದೂರ ಸರಿದ ಬಿಜೆಪಿ
ಮುಂಬೈ ಮೇಯರ್ ಸ್ಪರ್ಧೆಯಿಂದ ದೂರ ಸರಿದ ಬಿಜೆಪಿ   

ಮುಂಬೈ: ಬೃಹನ್‌ ಮುಂಬೈ ನಗರಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಹಾಗೂ ಯಾವುದೇ ಸ್ಥಾಯಿ ಸಮಿತಿಗೆ ಬಿಜೆಪಿ ಸ್ಪರ್ಧಿಸುವುದಿಲ್ಲ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಪ್ರಕಟಿಸಿದ್ದಾರೆ. ಬಿಜೆಪಿ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಹಾಗೂ ಶಿವಸೇನಾ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿದ್ದರೂ ನಗರ ಪಾಲಿಕೆ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಜಿದ್ದಾಜಿದ್ದಿ ಹೋರಾಡಿವೆ.

ಫಡಣವೀಸ್ ಸರ್ಕಾರಕ್ಕೆ ಶಿವಸೇನಾ ಬೆಂಬಲ ಅಗತ್ಯವಿರುವುದರಿಂದ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದರೆ ಸಮಸ್ಯೆ ಉಂಟಾಗಬಹುದು ಎಂಬುದು ಬಿಜೆಪಿಯ ಕೇಂದ್ರ ಮುಖಂಡರ ಲೆಕ್ಕಾಚಾರ.

ಕೇಂದ್ರ ಮುಖಂಡರ ಆಶಯದಂತೆ ಮೇಯರ್ ಮತ್ತು ಉಪ ಮೇಯರ್ ಸ್ಪರ್ಧೆಯಿಂದ ದೂರ ಉಳಿಯುವುದಾಗಿ ಫಡಣವೀಸ್ ಹೇಳಿದ್ದಾರೆ.

ರಾಜ್ಯದ ನಗರಪಾಲಿಕೆಗಳ ಆಡಳಿತದಲ್ಲಿ ಪಾರದರ್ಶಕತೆ ತರಲು ಸಮಿತಿಯೊಂದನ್ನು ರಚಿಸಲಾಗವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಇದಲ್ಲದೆ ಮುಂಬೈ ನಗರಕ್ಕೆ ಪ್ರತ್ಯೇಕ ಉಪ ಲೋಕಾಯುಕ್ತರನ್ನು ನೇಮಕ ಮಾಡುವಂತೆ ಲೋಕಾಯುಕ್ತರನ್ನು ಕೋರಲು ನಿರ್ಧರಿಸಲಾಗಿದೆ ಎಂದು ಫಡಣವೀಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.