ADVERTISEMENT

ಮುಸ್ಲಿಮರು ಯೋಗ ಮಾಡುವುದರಲ್ಲಿ ತಪ್ಪೇನಿಲ್ಲ, ಆದರೆ ಪೂಜೆಯಲ್ಲಿ ಭಾಗವಹಿಸುವುದು ಬೇಡ: ಮುಸ್ಲಿಂ ಧಾರ್ಮಿಕ ಮುಖಂಡ

​ಪ್ರಜಾವಾಣಿ ವಾರ್ತೆ
Published 25 ಮೇ 2017, 10:42 IST
Last Updated 25 ಮೇ 2017, 10:42 IST
ಮುಸ್ಲಿಮರು ಯೋಗ ಮಾಡುವುದರಲ್ಲಿ ತಪ್ಪೇನಿಲ್ಲ, ಆದರೆ ಪೂಜೆಯಲ್ಲಿ ಭಾಗವಹಿಸುವುದು ಬೇಡ: ಮುಸ್ಲಿಂ ಧಾರ್ಮಿಕ ಮುಖಂಡ
ಮುಸ್ಲಿಮರು ಯೋಗ ಮಾಡುವುದರಲ್ಲಿ ತಪ್ಪೇನಿಲ್ಲ, ಆದರೆ ಪೂಜೆಯಲ್ಲಿ ಭಾಗವಹಿಸುವುದು ಬೇಡ: ಮುಸ್ಲಿಂ ಧಾರ್ಮಿಕ ಮುಖಂಡ   

ಲಖನೌ: ಮುಸ್ಲಿಮರು ಯೋಗ ಮಾಡುವುದರಲ್ಲಿ ತಪ್ಪೇನಿಲ್ಲ, ಆದರೆ ಇದಕ್ಕೆ ಸಂಬಂಧಿಸಿದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಮುಸ್ಲಿಂ ಧಾರ್ಮಿಕ ಮುಖಂಡ ಮೌಲಾನಾ ಖಾಲೀದ್ ರಷೀದ್ ಫಿರಂಗಿ ಮಹಾಲಿ ಹೇಳಿದ್ದಾರೆ.

ನ್ಯೂಸ್ 18 ಮಾಧ್ಯಮದೊಂದಿಗೆ ಮಾತನಾಡಿದ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‍ಬಿ) ಸದಸ್ಯ ಮೌಲಾನಾ ಖಾಲೀದ್, ಯೋಗ ಮಾಡುವುದು ಒಳ್ಳೆಯ ಅಭ್ಯಾಸ. ಯೋಗ ದಿನಾಚರಣೆಯಲ್ಲಿ ಮುಸ್ಲಿಮರು ಭಾಗವಹಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಇದಕ್ಕೆ ಸಂಬಂಧಿಸಿದ ಪೂಜಾ ಕಾರ್ಯಗಳಿಂದ ಮುಸ್ಲಿಮರು ದೂರವಿರಬೇಕು ಎಂದಿದ್ದಾರೆ.

ಒಂದು ವೇಳೆ ಅಂತರ ರಾಷ್ಟ್ರೀಯ ಯೋಗ ದಿನಾಚಾರಣೆಯಲ್ಲಿ ಭಾಗವಹಿಸಲು ಆಮಂತ್ರಣ ನೀಡಿದರೆ ನಾನು ಭಾಗವಹಿಸುವೆ ಎಂದು ಅವರು ಹೇಳಿದ್ದಾರೆ. ಜೂನ್ 21ರಂದು ಇಲ್ಲಿನ ರಮಾಭಾಯಿ ಅಂಬೇಡ್ಕರ್ ಮೈದಾನದಲ್ಲಿ ಯೋಗ ದಿನಾಚರಣೆ ನಡೆಯಲಿದೆ.

ADVERTISEMENT

ಲಖನೌದಲ್ಲಿ ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.