ADVERTISEMENT

ಮೂರ್ನಾಲ್ಕು ತಿಂಗಳ ಹಿಂದೆಯೇ ಸುಳಿವು ದೊರೆತಿತ್ತೆಂದ ರಾಹುಲ್

ಏಜೆನ್ಸೀಸ್
Published 27 ಜುಲೈ 2017, 10:35 IST
Last Updated 27 ಜುಲೈ 2017, 10:35 IST
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)   

ನವದೆಹಲಿ: ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಕಾಂಗ್ರೆಸ್‌, ಆರ್‌ಜೆಡಿ ಜತೆಗಿನ ಮಹಾಮೈತ್ರಿ ತ್ಯಜಿಸಿ ಎನ್‌ಡಿಎ ಸೇರಿರುವ ಬಗ್ಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ನಿತೀಶ್ ಯೋಜನೆಯ ಬಗ್ಗೆ ಮೂರ್ನಾಲ್ಕು ತಿಂಗಳ ಹಿಂದೆಯೇ ಸುಳಿವು ದೊರೆತಿತ್ತು ಎಂದು ಹೇಳಿದ್ದಾರೆ.

ಸಂಸತ್ ಭವನದ ಹೊರಗೆ ವರದಿಗಾರರೊಂದಿಗೆ ಮಾತನಾಡಿದ ಅವರು, ‘ಕೋಮುವಾದಿಗಳ ವಿರುದ್ಧ ಅವರು (ನಿತೀಶ್) ನಮ್ಮ ಜತೆ ಕೈಜೋಡಿಸಿದ್ದರು. ಆದರೆ, ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಅವರು ಯಾರ ವಿರುದ್ಧ ಹೋರಾಡಿದ್ದರೋ ಅವರ ಜತೆ ಮತ್ತೆ ಕೈಜೋಡಿಸಿದರು’ ಎಂದು ಹೇಳಿದ್ದಾರೆ.

‘ಸ್ವಾರ್ಥಕ್ಕಾಗಿ ಜನ ಏನು ಬೇಕಾದರೂ ಮಾಡುತ್ತಾರೆ. ಅಲ್ಲಿ ಸಿದ್ಧಾಂತ, ವಿಶ್ವಾಸಾರ್ಹತೆ ಇರುವುದಿಲ್ಲ. ಅಂಥವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ’ ಎಂದು ರಾಹುಲ್ ಹೇಳಿದ್ದಾರೆ.

ADVERTISEMENT

ಬುಧವಾರ ಕಾಂಗ್ರೆಸ್, ಆರ್‌ಜೆಡಿ ಜತೆಗಿನ ಮೈತ್ರಿ ತ್ಯಜಿಸಿದ್ದ ನಿತೀಶ್ ಕುಮಾರ್ ಅವರು ಬಿಜೆಪಿ ಬೆಂಬಲದೊಂದಿಗೆ ಗುರುವಾರ ಬೆಳಿಗ್ಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.