ADVERTISEMENT

‘ಯುದ್ಧ ಶುರುವಾದರೆ ಹತ್ತು ದಿನಗಳಲ್ಲಿ ಮುಗಿಯಲಿದೆ ಭಾರತೀಯ ಸೇನೆಯ ಶಸ್ತ್ರಾಸ್ತ್ರ ಸಂಗ್ರಹ’

ಏಜೆನ್ಸೀಸ್
Published 22 ಜುಲೈ 2017, 10:57 IST
Last Updated 22 ಜುಲೈ 2017, 10:57 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಸೇನೆಯ ಯುದ್ಧ ಸಾಮಗ್ರಿ ಸಂಗ್ರಹದ ಮಾಹಿತಿಯನ್ನು ಹೊರಹಾಕಿರುವ ಮಹಾಲೇಖಪಾಲರ (ಸಿಎಜಿ) ವರದಿಯು ಒಂದು ವೇಳೆ ಕದನ ಆರಂಭವಾದರೆ ಸೇನೆಯ ಶಸ್ತ್ರಾಸ್ತ್ರ ಸಂಗ್ರಹ 10 ದಿನಗಳಲ್ಲಿ ಮುಗಿಯಲಿದೆ ಎಂದು ಹೇಳಿದೆ.

ಶುಕ್ರವಾರ ಸಂಸತ್‌ ಮುಂದೆ ಮಂಡನೆಯಾದ ಸಿಎಜಿ ವರದಿಯಲ್ಲಿ ಈ ಬೆಚ್ಚಿ ಬೀಳಿಸುವ ಅಂಶವಿದೆ. ಭಾರತೀಯ ಸೇನೆಯ ಶಸ್ತ್ರಾಸ್ತ್ರ ಸಂಗ್ರಹ ಕಡಿಮೆ ಇದೆ ಎಂಬ ಸ್ಫೋಟಕ ಮಾಹಿತಿಯನ್ನು ವರದಿ ಹೊರಹಾಕಿದೆ.

‘ನಮ್ಮ ಪರಿಶೀಲನೆ ವೇಳೆ ಸೇನೆಯ ಶಸ್ತ್ರಾಸ್ತ್ರ ಸಂಗ್ರಹದಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ. 2013ರಲ್ಲಿ ಯಾವ ರೀತಿಯ ಸಂಗ್ರಹವಿತ್ತೋ ಅದೇ ಸಂಗ್ರಹ ಸೇನೆಯ ಬಳಿ ಇದೆ. ಒಂದು ವೇಳೆ ಯುದ್ಧ ಆರಂಭವಾದರೆ ಈ ಸಂಗ್ರಹ 10 ದಿನಗಳಲ್ಲಿ ಮುಗಿಯಬಹುದು’ ಎಂದು ವರದಿ ತಿಳಿಸಿದೆ.

ADVERTISEMENT

‘152 ಯುದ್ಧ ಸಾಮಗ್ರಿಗಳ ಪೈಕಿ 61 ಯುದ್ಧ ಸಾಮಗ್ರಿಗಳ ಸಂಗ್ರಹ ತುಂಬಾ ಕಡಿಮೆ ಇದೆ. ಶಸ್ತ್ರಾಸ್ತ್ರ ಸಂಗ್ರಹವು ಯೋಧರ ತರಬೇತಿಯ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ವರದಿ ಹೇಳಿದೆ.

‘ಸಿಎಜಿ ವರದಿ ಬಹಿರಂಗವಾದ ಬಳಿಕ ಕೊರತೆ ಇರುವ ಯುದ್ಧ ಸಾಮಗ್ರಿ ಪೂರೈಸಿಕೊಳ್ಳಲು ಸೇನೆ ಮುಂದಾಗಿದೆ. ಮುಂದಿನ ತಿಂಗಳ ಆರಂಭದಲ್ಲಿ ಸೇನೆಯು ಅಗತ್ಯವಿರುವ ಯುದ್ಧ ಸಾಮಗ್ರಿ ಪೂರೈಕೆ ಪ್ರಕ್ರಿಯೆಗೆ ಚಾಲನೆ ನೀಡಲಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.