ADVERTISEMENT

ರಾಜಪಥದಲ್ಲಿ ಕರ್ನಾಟಕ ಜಾನಪದ ಕಲೆಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ರಾಜಪಥದಲ್ಲಿ ಕರ್ನಾಟಕ ಜಾನಪದ ಕಲೆಗಳ ಅನಾವರಣ
ರಾಜಪಥದಲ್ಲಿ ಕರ್ನಾಟಕ ಜಾನಪದ ಕಲೆಗಳ ಅನಾವರಣ   

ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ರಾಜಪಥ್‌ನಲ್ಲಿ ನಡೆಯಲಿರುವ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಕರ್ನಾಟಕದ ಶ್ರೀಮಂತ ಜಾನಪದ ಕಲೆಗಳ ಪರಂಪರೆ ಅನಾವರಣಗೊಳ್ಳಲಿದೆ.

ಗೊರವರ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ನೃತ್ಯ, ಪೂಜಾ ಕುಣಿತ ಮತ್ತು ಸೋಮನ ಕುಣಿತ ಸೇರಿದಂತೆ 10 ಜಾನಪದ ಕಲೆಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುತ್ತಿದೆ. ಗೊರವರ ಕುಣಿತ ಸ್ತಬ್ಧಚಿತ್ರವನ್ನು ಮುನ್ನಡೆಸಲಿದೆ. ಸೋಮನ ಕುಣಿತ  ಕೊನೆಯಲ್ಲಿದ್ದು ಪ್ರದರ್ಶನ ನೀಡಲಿದೆ ಎಂದು ವಾರ್ತಾ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌  ಭಾನುವಾರ ಹೇಳಿದ್ದಾರೆ.

ಖ್ಯಾತ ಕಲಾವಿದ ಶಶಿಧರ ಅಡಪ ಮತ್ತು ಅವರ ತಂಡ ಈ ಸ್ತಬ್ಧಚಿತ್ರದ ವಿನ್ಯಾಸ ಮಾಡಿದೆ. ಸಂಗೀತ ನಿರ್ದೇಶಕ ವಿ. ಮನೋಹರ ಹಿನ್ನೆಲೆ ಸಂಗೀತ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.