ADVERTISEMENT

ರಾಜೀವ್‌ ಮಾಥುರ್‌ ಮುಖ್ಯ ಮಾಹಿತಿ ಆಯುಕ್ತ

​ಪ್ರಜಾವಾಣಿ ವಾರ್ತೆ
Published 23 ಮೇ 2014, 12:57 IST
Last Updated 23 ಮೇ 2014, 12:57 IST

ನವದೆಹಲಿ (ಪಿಟಿಐ): ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥ ರಾಜೀವ್‌ ಮಾಥುರ್‌ ಅವರು ಗುರುವಾರ ಕೇಂದ್ರ ಮಾಹಿತಿ ಆಯೋಗದ ಹೊಸ ಮುಖ್ಯ ಮಾಹಿತಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಗುರುವಾರ ರಾಷ್ಟ್ರಪತಿ ಭವನದ  ಪ್ರಣವ್‌ ಮುಖರ್ಜಿ ಅವರ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುಷ್ಮಾ ಸಿಂಗ್‌ ಅವರ ರಾಜೀನಾಮೆ ನಂತರ 6ನೇ ಮುಖ್ಯ ಮಾಹಿತಿ ಆಯುಕ್ತರಾಗಿ ರಾಜೀವ್‌ ಮಾಥುರ್‌ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.