ADVERTISEMENT

ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗೆ ಅಧಿಕಾರಿಗಳಿಗಿಂತ ಕಡಿಮೆ ಸಂಬಳ

ಪಿಟಿಐ
Published 19 ನವೆಂಬರ್ 2017, 19:32 IST
Last Updated 19 ನವೆಂಬರ್ 2017, 19:32 IST
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗೆ ಅಧಿಕಾರಿಗಳಿಗಿಂತ ಕಡಿಮೆ ಸಂಬಳ
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗೆ ಅಧಿಕಾರಿಗಳಿಗಿಂತ ಕಡಿಮೆ ಸಂಬಳ   

ನವದೆಹಲಿ: ‘ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ವೇತನವು ಇನ್ನೂ ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳ ವೇತನಕ್ಕಿಂತ ಕಡಿಮೆಯೇ ಇದೆ. 7ನೇ ವೇತನ ಆಯೋಗ ಜಾರಿಯಾಗಿದ್ದರೂ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ವೇತನ ಹೆಚ್ಚಳಕ್ಕೆ ಸಂಪುಟ ಕಾರ್ಯಾಲಯ ಅನುಮೋದನೆ ನೀಡಿಲ್ಲ. ಅಲ್ಲದೆ ದೇಶದ ಪ್ರಥಮ ಪ್ರಜೆಯ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿಯಮಗಳಿಗೆ ಇನ್ನೂ ಅಗತ್ಯ ತಿದ್ದುಪಡಿ ತಂದಿಲ್ಲ’ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ.

‘ಇದಕ್ಕೆ ಸಂಬಂಧಿಸಿದ ಕಡತವನ್ನು ಗೃಹ ಸಚಿವಾಲಯವು ಒಂದು ವರ್ಷದ ಹಿಂದೆಯೇ ಸಂಪುಟ ಕಾರ್ಯಾಲಯಕ್ಕೆ ತಲುಪಿಸಿದೆ. ಆದರೆ ಅನುಮೋದನೆ ನೀಡಲು ವಿಳಂಬ ಮಾಡುತ್ತಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT