ADVERTISEMENT

‘ರಾಹುಲ್‌ ವಿಫಲ ನಾಯಕ’

​ಪ್ರಜಾವಾಣಿ ವಾರ್ತೆ
Published 27 ಮೇ 2018, 19:30 IST
Last Updated 27 ಮೇ 2018, 19:30 IST

ನವದೆಹಲಿ: ಗಾಂಧಿ–ನೆಹರೂ ಕುಟುಂಬದ ಕುಡಿಯಾದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಬ್ಬ ‘ವಿಫಲ ನಾಯಕ’ ಎಂದು ಬಿಜೆಪಿ ಲೇವಡಿ ಮಾಡಿದೆ.

‘ರಾಹುಲ್‌ ನಾಯಕತ್ವದಲ್ಲಿ ಕಾಂಗ್ರೆಸ್‌ ಸಾಲು, ಸಾಲಾಗಿ ಸೋಲು ಕಂಡಿರುವುದನ್ನು ಬಿಟ್ಟರೆ ಒಂದೇ ಒಂದು ಚುನಾವಣೆಯನ್ನೂ ಗೆದ್ದಿಲ್ಲ’ ಎಂದು ಬಿಜೆಪಿ ನಾಯಕರು ಕುಹಕವಾಡಿದ್ದಾರೆ.

ನಾಲ್ಕು ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ ಎಂಬ ರಾಹುಲ್‌ ಟೀಕೆಗೆ ಬಿಜೆಪಿ ಈ ರೀತಿ ತಿರುಗೇಟು ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.