ADVERTISEMENT

ವಡೋದರಾ ಬಿಟ್ಟು ವಾರಾಣಸಿ ಆಯ್ದ ಮೋದಿ

​ಪ್ರಜಾವಾಣಿ ವಾರ್ತೆ
Published 29 ಮೇ 2014, 13:42 IST
Last Updated 29 ಮೇ 2014, 13:42 IST

ನವದೆಹಲಿ (ಪಿಟಿಐ): ತವರು ರಾಜ್ಯ ಗುಜರಾತ್‌ನಲ್ಲಿರುವ ವಡೋದರಾ ಕ್ಷೇತ್ರವನ್ನು ಗುರುವಾರ ತೊರೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.

ಇತ್ತಿಚೇಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ಬಿಜೆಪಿ ಪಕ್ಷ  ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 71 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು.

ಉತ್ತರ ಪ್ರದೇಶದಲ್ಲಿ ಎರಡು  ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್‌ ಅವರೂ ಒಂದು ಸ್ಥಾನವನ್ನು ತೊರೆದಿದ್ದಾರೆ. ಮೈನಪುರಿ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಮುಲಾಯಂ ಅವರು ಅಜಂಗಡವನ್ನು ಉಳಿಸಿಕೊಂಡಿದ್ದಾರೆ.

ADVERTISEMENT

ನಿಯಮಗಳ ಪ್ರಕಾರ, ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಆಯ್ಕೆಯಾಗುವ ಸದಸ್ಯರು ಫಲಿತಾಂಶ ಪ್ರಕಟವಾದ 14 ದಿನಗಳ ಒಳಗೆ ಒಂದು ಕ್ಷೇತ್ರವನ್ನು ‘ಖಾಲಿ’ ಮಾಡಬೇಕು.

ಇದೇ ತಿಂಗಳ 16ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿತ್ತು. ರಾಜೀನಾಮೆ ನೀಡಲು
ಇಂದು (ಗುರುವಾರ) ಕೊನೆಯ ದಿನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.