ADVERTISEMENT

ವಾಪಿಯಲ್ಲಿ ಪ್ಲಾಸ್ಟಿಕ್‌ ಸಂಶೋಧನಾ ವಿಶ್ವವಿದ್ಯಾಲಯ

ಪಿಟಿಐ
Published 20 ಜನವರಿ 2017, 19:38 IST
Last Updated 20 ಜನವರಿ 2017, 19:38 IST
ವಾಪಿಯಲ್ಲಿ ಪ್ಲಾಸ್ಟಿಕ್‌ ಸಂಶೋಧನಾ ವಿಶ್ವವಿದ್ಯಾಲಯ
ವಾಪಿಯಲ್ಲಿ ಪ್ಲಾಸ್ಟಿಕ್‌ ಸಂಶೋಧನಾ ವಿಶ್ವವಿದ್ಯಾಲಯ   

ವಡೋದರ: ಗುಜರಾತ್‌ ಸರ್ಕಾರದ ಸಹಕಾರದಲ್ಲಿ ಸಂಪೂರ್ಣ ಕಾಗದರಹಿತ ಮತ್ತು ಪರಿಸರ ಸ್ನೇಹಿ ಪ್ಲಾಸ್ಟಿಕ್‌ ಸಂಶೋಧನಾ ವಿಶ್ವವಿದ್ಯಾಲಯ ಇಲ್ಲಿನ ವಾಪಿಯಲ್ಲಿ ಶೀಘ್ರ ಆರಂಭಗೊಳ್ಳಲಿದೆ.

‘ವಾಪಿಯ 30 ಎಕರೆ ಪ್ರದೇಶದಲ್ಲಿ ಪ್ಲಾಸ್ಟ್‌ಇಂಡಿಯಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ 4 ವರ್ಷಗಳ ಅವಧಿಯ ಬಿ.ಟೆಕ್‌, 2 ವರ್ಷಗಳ ಎಂ.ಟೆಕ್‌ ಹಾಗೂ ಡಾಕ್ಟರೇಟ್‌  ಮತ್ತು ಅಲ್ಪಾವಧಿಯ ಕೋರ್ಸ್‌ಗಳು ಆರಂಭಗೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ. ಪ್ಲಾಸ್ಟಿಕ್‌ ಇಂಡಿಯಾ ಫೌಂಡೇಶನ್‌ ಪ್ರಾಯೋಜಕತ್ವದಲ್ಲಿ ಈ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.