ADVERTISEMENT

ವಾರದ ಮಟ್ಟಿಗೆ ತಗ್ಗಲಿದೆ ಮುಂಗಾರು

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 20:17 IST
Last Updated 26 ಜುಲೈ 2017, 20:17 IST
ವಾರದ ಮಟ್ಟಿಗೆ ತಗ್ಗಲಿದೆ ಮುಂಗಾರು
ವಾರದ ಮಟ್ಟಿಗೆ ತಗ್ಗಲಿದೆ ಮುಂಗಾರು   

ನವದೆಹಲಿ: ದೇಶದ ಬಹುತೇಕ ಸ್ಥಳಗಳಲ್ಲಿ ಗುರುವಾರದಿಂದ ಒಂದು ವಾರದ ಮಟ್ಟಿಗೆ ಮುಂಗಾರು ಮಳೆ ಪ್ರಮಾಣ ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜುಲೈ 27ರಿಂದ ಆಗಸ್ಟ್ 2ರವರೆಗಿನ ಅವಧಿಯಲ್ಲಿ ಮಳೆ ಪ್ರಮಾಣವು ಸಾಮಾನ್ಯಕ್ಕಿಂತ ಕಡಿಮೆಯಿರಲಿದೆ ಎಂದು  ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್ ತಿಳಿಸಿದ್ದಾರೆ.

ಈ ರೀತಿ ಆಗುತ್ತಿರುವುದು ಜುಲೈ ತಿಂಗಳಲ್ಲಿ ಇದು ಎರಡನೇ ಬಾರಿ. ತಿಂಗಳ ಆರಂಭದಲ್ಲಿ ಒಂದು ವಾರ ಮಳೆ ತಗ್ಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.