ADVERTISEMENT

ವಿಮಾನದೊಳಗೆ ಆತ್ಮ ಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2014, 20:01 IST
Last Updated 5 ಏಪ್ರಿಲ್ 2014, 20:01 IST

ಹೈದರಾಬಾದ್‌ (ಪಿಟಿಐ): ದುಬೈನಿಂದ ವಿಮಾನದಲ್ಲಿ ಬಂದ ಪ್ರಯಾಣಿಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಶನಿವಾರ ನಡೆದಿದೆ.

‘ಮೊಹಮ್ಮದ್‌ ಇಮ್ತಿಯಾಜ್‌,  ವಿಮಾನದ ಶೌಚಾಲಯದಲ್ಲಿ  ಬ್ಲೇಡಿ ನಿಂದ ತಮ್ಮ ಗಂಟಲು ಸೀಳಿಕೊಂಡರು. ಪ್ರಜ್ಞಾಶೂನ್ಯರಾದ  ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು.  ಈಗಲೂ ಅವರಿಗೆ ಪ್ರಜ್ಞೆ ಬಂದಿಲ್ಲ. ಇದು ಆತ್ಮಹತ್ಯೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT