ADVERTISEMENT

ವಿಮಾನ ಪತ್ತೆಗೆ ತೀವ್ರ ಶೋಧ

ಕಾರ್ಯಾಚರಣೆ ಸ್ಥಳಕ್ಕೆ ಪರಿಕ್ಕರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 9:44 IST
Last Updated 23 ಜುಲೈ 2016, 9:44 IST
ವಿಮಾನ ಪತ್ತೆಗೆ ತೀವ್ರ ಶೋಧ
ವಿಮಾನ ಪತ್ತೆಗೆ ತೀವ್ರ ಶೋಧ   

ಚೆನ್ನೈ(ಪಿಟಿಐ): ಕಣ್ಮರೆಯಾಗಿರುವ ವಾಯುಪಡೆಯ ಎಎನ್‌–32 ವಿಮಾನ ಪತ್ತೆಗೆ ಶನಿವಾರ ತೀವ್ರ ಶೋಧ ಮುಂದುವರೆದಿದೆ. ಈ ನಡುವೆ ರಕ್ಷಣಾ ಸಚಿವ ಮನೋಹರ ಪರಿಕ್ಕರ್‌ ಅವರು ಚೆನ್ನೈನ ವಾಯನೆಲೆಗೆ ಆಗಮಿಸಿದ್ದು, ಕಾರ್ಯಾಚರಣೆಯ ಮೇಲೆ ನಿಗಾವಹಿಸಿದ್ದಾರೆ.

ಶೋಧ ಕಾರ್ಯಾಚರಣೆ ನಿಗಾವಹಿಸಲು ತಾಂಬರಮ್ ವಾಯು ನೆಲೆಗೆ ಆಗಮಿಸಿದ್ದಾಗಿ ಪರಿಕ್ಕರ್‌ ಟ್ವೀಟ್‌ ಮಾಡಿದ್ದಾರೆ.

ವಾಯುಪಡೆ, ನೌಕಾಪಡೆ ಹಾಗೂ ಭಾರತೀಯ ಕರಾವಳಿ ಪಡೆ ಜಂಟಿಯಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿವೆ.

ಶುಕ್ರವಾರ ಆರು ಸಿಬ್ಬಂದಿ ಸೇರಿ 29ಮಂದಿಯನ್ನು ಹೊತ್ತು ಚೆನ್ನೈನಿಂದ ಪೋರ್ಟ್‌ಬ್ಲೇರ್‌ಗೆ ಬೆಳಿಗ್ಗೆ 8.30ಕ್ಕೆ ಹೊರಟ್ಟಿದ್ದ ಭಾರತೀಯ ವಾಯುಪಡೆಯ ವಿಮಾನ, ಹಾರಾಟ ಆರಂಭಿಸಿದ 16 ನಿಮಿಷಗಳ ಬಳಿಕ ರೇಡಾರ್‌ನಿಂದ ಸಂಪರ್ಕ ಕಳೆದುಕೊಂಡಿತ್ತು.

11.30ಕ್ಕೆ ಪೋರ್ಟ್‌ಬ್ಲೇರ್‌ ತಲುಪಬೇಕಿದ್ದ ವಿಮಾನ ಬಂಗಾಳ ಕೊಲ್ಲಿಯಲ್ಲಿ ಪತನವಾಗಿರುವ ಶಂಕೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.