ADVERTISEMENT

ವೈದ್ಯೆ ಮೇಲೆ ಆಸಿಡ್ ದಾಳಿ: ಬಾಲಕರ ಸೆರೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2014, 19:30 IST
Last Updated 25 ಡಿಸೆಂಬರ್ 2014, 19:30 IST

ನವದೆಹಲಿ (ಐಎಎನ್‌ಎಸ್‌): ವೈದ್ಯೆಯೊಬ್ಬರ ಮೇಲೆ ಆಸಿಡ್ ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಬಾಲಕರನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ.

ರಾಜ್ಯ ಕಾರ್ಮಿಕ ವಿಮಾ ಆಸ್ಪತ್ರೆಯ ವೈದ್ಯೆ ಅಮೃತಾ ಕೌರ್ (30) ಆಸಿಡ್ ದಾಳಿಗೊಳಗಾದವರು. ಕೌರ್ ಅವರ ಸಹೋದ್ಯೋಗಿ ಅರವಿಂದ್ ಯಾದವ್ ತನ್ನ ಸ್ನೇಹಿತ ವೈಭವ್ ಎಂಬಾತನೊಂದಿಗೆ ಸೇರಿ ಕೃತ್ಯದ ಸಂಚು ರೂಪಿಸಿದ್ದ.

ತನ್ನನ್ನು ಮದುವೆಯಾಗುವಂತೆ ಕೌರ್ ಅವರನ್ನು ಅರವಿಂದ್ ಒತ್ತಾಯಿ­ಸುತ್ತಿದ್ದ. ಅರವಿಂದ್‌ ಪ್ರಸ್ತಾಪವನ್ನು ನಿರಾಕರಿಸಿದ್ದ ಕೌರ್ ಅವರಿಗೆ, ಎಂಟು ತಿಂಗಳ ಹಿಂದೆ ಬೇರೊಬ್ಬರೊಂದಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ಇದರಿಂದ ಕುಪಿತಗೊಂಡಿದ್ದ ಅರವಿಂದ್, ಆಸಿಡ್ ದಾಳಿ ನಡೆಸಲು ಇಬ್ಬರು ಬಾಲಕರಿಗೆ ಸುಪಾರಿ ನೀಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.