ADVERTISEMENT

ಶಾರುಖ್‌ಗೆ ಇ. ಡಿ ನೋಟಿಸ್

ಪಿಟಿಐ
Published 24 ಮಾರ್ಚ್ 2017, 20:35 IST
Last Updated 24 ಮಾರ್ಚ್ 2017, 20:35 IST
ಶಾರುಖ್‌ಗೆ ಇ. ಡಿ ನೋಟಿಸ್
ಶಾರುಖ್‌ಗೆ ಇ. ಡಿ ನೋಟಿಸ್   

ನವದೆಹಲಿ: ಟಿ–20 ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ₹73.6 ಕೋಟಿ ವಿದೇಶಿ ವಿನಿಮಯ ನಷ್ಟ ಮಾಡಲಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ಬಾಲಿವುಡ್ ನಟ ಶಾರುಖ್ ಖಾನ್, ಅವರ ಪತ್ನಿ ಗೌರಿ ಮತ್ತು ನಟಿ ಜೂಹಿ ಛಾವ್ಲಾ  ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮಾಲೀಕತ್ವ ಹೊಂದಿರುವ ಸಂಸ್ಥೆಯಾದ ನೈಟ್ ರೈಡರ್ಸ್ ಸ್ಪೋರ್ಟ್ಸ್‌ಗೂ ನೋಟಿಸ್ ನೀಡಲಾಗಿದೆ ಎಂದು ಇ. ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ಈ ಎರಡೂ ಸಂಸ್ಥೆಗಳು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಕೆಲವು ಷೇರುಗಳನ್ನು ಮಾರಿಷಸ್ ಕಂಪೆನಿಗೆ ಮಾರಾಟ ಮಾಡುವ ಮೂಲಕ ₹73.6 ಕೋಟಿ ವಿದೇಶಿ ವಿನಿಮಯ ನಷ್ಟ ಉಂಟು ಮಾಡಿವೆ ಎಂದು ಇ. ಡಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.