ADVERTISEMENT

ಶಾಸಕ ಖಮರುಲ್ ಇಸ್ಲಾಂ ನಿಧನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಶಾಸಕ ಖಮರುಲ್ ಇಸ್ಲಾಂ ನಿಧನ
ಶಾಸಕ ಖಮರುಲ್ ಇಸ್ಲಾಂ ನಿಧನ   

ಬೆಂಗಳೂರು: ಕಲಬುರ್ಗಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಖಮರುಲ್ ಇಸ್ಲಾಂ (69) ಸೋಮವಾರ ಹೃದಯಾ ಘಾತದಿಂದ ನಿಧನರಾದರು.

ಹೃದಯ ಸಂಬಂಧಿ ಕಾಯಿಲೆ ಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಕೆಲ ದಿನಗಳ ಹಿಂದೆ ನಗರದ ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದರು.

ಅವರಿಗೆ ಪತ್ನಿ ಖನ್ನೀಸಾ ಫಾತಿಮಾ ಬೇಗಂ ಹಾಗೂ ದತ್ತು ಪುತ್ರ ಫರೋಜ್ ಉಲ್ ಇಸ್ಲಾಂ ಇದ್ದಾರೆ. ಖಮರುಲ್ ಪಾರ್ಥಿವ ಶರೀರವನ್ನು ಆರ್.ಟಿ. ನಗರದಲ್ಲಿರುವ ನಿವಾಸದಲ್ಲಿ ಕೆಲಹೊತ್ತು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.

ADVERTISEMENT

ಬಳಿಕ ಮನೆಯಿಂದ ಖಾದ್ರಿಯಾ -ಎ-ಮಸ್ಜಿದ್ (ಜಯಮಹಲ್)ಗೆ ತಂದು ಅಂತಿಮ ಗೌರವ ಸಲ್ಲಿಸಲಾಯಿತು. ಬಳಿಕ ವಿಶೇಷ ವಿಮಾನ ಮೂಲಕ ಹೈದರಾಬಾದ್‌ಗೆ, ಅಲ್ಲಿಂದ ರಸ್ತೆ ಮೂಲಕ ಹುಟ್ಟೂರಾದ ಕಲಬುರ್ಗಿಗೆ ಪಾರ್ಥಿವ ಶರೀರ ರವಾನಿಸಲಾಯಿತು.

ಇಂದು ಅಂತ್ಯಕ್ರಿಯೆ

ಕಲಬುರ್ಗಿ: ಖಮರುಲ್‌ ಅಂತ್ಯಕ್ರಿಯೆ (ತಡ್ಫೀನ್) ಕಲಬುರ್ಗಿಯ ರೋಜಾ–ಇ–ಖಲಂದರ ಖಾನ್ ರುದ್ರಭೂಮಿಯಲ್ಲಿ ಸೆ. 19ರಂದು ರಾತ್ರಿ 9.30ರಿಂದ 10.30ರ ಮಧ್ಯೆ ನಡೆಯಲಿದೆ.

ಬೆಳಿಗ್ಗೆ 8.30ರಿಂದ 9.30 ಗಂಟೆಯವರೆಗೆ ನಿವಾಸದಲ್ಲಿ ಕುಟುಂಬದ ಸದಸ್ಯರು ಹಾಗೂ ಬಂಧುಗಳು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವರು.

ಬೆಳಿಗ್ಗೆ 10.30ರಿಂದ ಸಂಜೆ 6 ಗಂಟೆಯವರೆಗೆ ಕೆಸಿಟಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.