ADVERTISEMENT

ಸಂತ್ರಸ್ತರ ನೆರವಿಗೆ ವಾಯುಪಡೆ

ಗೋಮಾಂಸ ಸೇವನೆ, ಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ನವದೆಹಲಿ (ಪಿಟಿಐ): ಗೋಮಾಂಸ ಸೇವನೆ ಶಂಕೆಯಲ್ಲಿ ಹತ್ಯೆಯಾದ ಇಕ್ಲಾಖ್ ಕುಟುಂಬದ ನೆರವಿಗೆ ಭಾರತೀಯ ವಾಯುಪಡೆ ಮುಂದಾಗಿದೆ.

ಐಎಎಫ್ ಸಿಬ್ಬಂದಿ ಮಹಮ್ಮದ್ ಸರ್ತಾಜ್ ತಂದೆ ಇಕ್ಲಾಖ್  ಅವರು ಹತ್ಯೆಯಾಗಿರುವುದು ದುರದೃಷ್ಟಕರ. ಈಗ ಇಕ್ಲಾಖ್ ಅವರ ಕುಟುಂಬವನ್ನು ಐಎಎಫ್‌ ವಸತಿ ಪ್ರದೇಶಕ್ಕೆ ಸ್ಥಳಾಂತರಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಐಎಎಫ್ ಮುಖ್ಯಸ್ಥ  ಅರೂಪ್ ರಾಹ ಹೇಳಿದ್ದಾರೆ. 

ವಾಯುಸೇನಾ ದಿನಾಚರಣೆ ಕುರಿತು ಇಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿದ್ದಾರೆ.  ‘ಸರ್ತಾಜ್ ಕುಟುಂಬಕ್ಕೆ ಅಗತ್ಯವಿರುವ ರಕ್ಷಣೆ ಮತ್ತು ಬೆಂಬಲವನ್ನು ನಾವು ನೀಡುತ್ತೇವೆ. ಸರ್ತಾಜ್ ಅವರು ಸದ್ಯ ಚೆನ್ನೈನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಕುಟುಂಬವನ್ನು ಚೆನ್ನೈಗೆ ಸ್ಥಳಾಂತರಿಸುವುದು ಅಥವಾ ಕುಟುಂಬ ಎಲ್ಲಿ ಇರಲು ಬಯಸುತ್ತದೋ ಅಲ್ಲಿಗೆ ಸರ್ತಾಜ್ ವರ್ಗಾವಣೆ ಮಾಡುವ ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದಿದ್ದಾರೆ.

ಕೇಂದ್ರದ ಪ್ರಾಯೋಜಕತ್ವ: (ಪಿಟಿಐ): ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ತೀವ್ರಗಾಮಿಗಳ ಗುಂಪು ಬೆಳೆಯುತ್ತಿರುವುದರ ಫಲವೇ ಇಕ್ಲಾಖ್ ಹತ್ಯೆ. ಈ ಗುಂಪುಗಳು, ಗೋಹತ್ಯೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿವೆ. ಈ ಮೂಲಕ ಸಾಮಾಜಿಕ ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿವೆ ಎಂದು ಸಿಪಿಐನ ಪ್ರಕಾಶ್ ಕಾರಟ್ ಆರೋಪಿಸಿದ್ದಾರೆ.

***
ಇಕ್ಲಾಖ್ ಹತ್ಯೆಗೆ ಸಂಬಂಧ ರಾಜ್ಯದ ಜನತೆ ಶಾಂತಿ ಕಾಪಾಡಬೇಕು. ತನಿಖೆ ನಡೆಸಲು ರಾಜ್ಯ ಸರ್ಕಾರದೊಂದಿಗೆ ಸಹಕರಿಸಬೇಕು
-ರಾಮ್ ನಾಯಕ್, 
ಉತ್ತರ ಪ್ರದೇಶ ರಾಜ್ಯಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT