ADVERTISEMENT

ಸಂಪುಟದಿಂದ ಮೂವರನ್ನು ಕೈಬಿಟ್ಟ ಜಯಲಲಿತಾ

​ಪ್ರಜಾವಾಣಿ ವಾರ್ತೆ
Published 19 ಮೇ 2014, 19:30 IST
Last Updated 19 ಮೇ 2014, 19:30 IST

ಚೆನ್ನೈ (ಐಎಎನ್‌ಎಸ್‌): ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮೂವರು ಸಚಿವರನ್ನು ಕೈಬಿಟ್ಟು ಆ ಸ್ಥಾನಗಳಿಗೆ ಹೊಸಬರನ್ನು ಸೇರಿಸಿ­ಕೊಳ್ಳುವ ಮೂಲಕ ಸಚಿವ ಸಂಪುಟ­ವನ್ನು ಪುನರ್‌ರಚಿಸಿದ್ದಾರೆ. ಕೃಷಿ ಸಚಿವ ಎಸ್‌. ದಾಮೋದರನ್, ಕಾರ್ಮಿಕ ಸಚಿವ ಕೆ. ಪಚಮಲ್‌ ಮತ್ತು ಕಂದಾಯ ಸಚಿವ ಬಿ. ವಿ. ರಾಮಣ್ಣ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ.

ಎಸ್‌. ಎಸ್. ಕೃಷ್ಣಮೂರ್ತಿ (ಕೃಷಿ), ಎಸ್‌. ಪಿ. ವೇಲುಮಣಿ ( ನಗರಾಡಳಿತ ಮತ್ತು ಗ್ರಾಮೀಣಾಭಿವೃದ್ಧಿ) ಮತ್ತು ಎಸ್‌. ಗೋಕುಲಾ ಇಂದಿರಾ (ಕೈಮಗ್ಗ ಮತ್ತು ಜವಳಿ) ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ಖಾತೆಗಳ ಮರು ಹಂಚಿಕೆಯಾಗಿದ್ದು, ನಗರಾಡಳಿತ ಸಚಿವ ಕೆ. ಪಿ. ಮುನಿಸ್ವಾಮಿ ಅವರಿಗೆ ಕಾರ್ಮಿಕ ಖಾತೆ ಮತ್ತು  ಕ್ರೀಡೆ  ಹಾಗೂ ಯುವಜನ ಖಾತೆಯ ಸಚಿವ ಆರ್‌. ಬಿ. ಉದಯ್‌ಕುಮಾರ್ ಅವರಿಗೆ ಕಂದಾಯ ಖಾತೆ ನೀಡಲಾಗಿದೆ. ಇದ­ಲ್ಲದೇ ಪಕ್ಷದ ಆರು ಮಂದಿ ಪದಾಧಿ­ಕಾರಿ­ಗಳನ್ನೂ ಜಯಲಲಿತ ಅವರು ಕೈಬಿಟ್ಟಿದ್ದಾರೆ.

ತಂಬಿದುರೈ ಆಯ್ಕೆ: ಎಐಎಡಿಎಂಕೆ ಸಂಸದೀಯ ಪಕ್ಷದ ನಾಯಕರಾಗಿ ಎಂ.ತಂಬಿದುರೈ ಹಾಗೂ ಉಪನಾಯಕ­ರಾಗಿ ಡಾ.ವಿ.ಮೈತ್ರೆಯನ್‌ ಆಯ್ಕೆ­ಯಾಗಿದ್ದಾರೆ.

ಕರೂರ್‌ ಕ್ಷೇತ್ರದಿಂದ ಆಯ್ಕೆಯಾದ ತಂಬಿ­ದುರೈ ಈ ಹಿಂದೆ ಲೋಕಸಭೆಯ ಡೆಪ್ಯೂಟಿ ಸ್ಪೀಕರ್‌ ಆಗಿದ್ದರು. ತಮಿಳು­ನಾಡು ಮುಖ್ಯಮಂತ್ರಿ ಜಯ­ಲಲಿತಾ ಅಧ್ಯಕ್ಷತೆ­ಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.