ADVERTISEMENT

ಸಂಪುಟ ಕಾರ್ಯದರ್ಶಿಯಾಗಿ ಪಿ.ಕೆ. ಸಿನ್ಹಾ ನೇಮಕ

​ಪ್ರಜಾವಾಣಿ ವಾರ್ತೆ
Published 29 ಮೇ 2015, 10:09 IST
Last Updated 29 ಮೇ 2015, 10:09 IST

ನವದೆಹಲಿ(ಐಎಎನ್‌ಎಸ್): ಕೇಂದ್ರ ಸಂಪುಟದ ಕಾರ್ಯದರ್ಶಿಯಾಗಿ ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ಪ್ರದೀಪ್ ಕುಮಾರ್ ಸಿನ್ಹಾ ಅವರು ನೇಮಕಗೊಂಡಿದ್ದಾರೆ.

ಜೂನ್ 13ರಿಂದ ಅನ್ವಯವಾಗುವಂತೆ ಸಂಪುಟದ ಕಾರ್ಯದರ್ಶಿಯಾಗಿ ಪಿ.ಕೆ. ಸಿಂನ್ಹಾ ಅವರ ನೇಮಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಗೆ ನೀಡಿದ್ದಾರೆ. ನೂತನ ಕಾರ್ಯದರ್ಶಿಯಾಗಿ ಸಿನ್ಹಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಶುಕ್ರವಾರ ಪ್ರಧಾನ ಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಪ್ರಸ್ತುತ ಸಂಪುಟ ಕಾರ್ಯದರ್ಶಿಯಾಗಿದ್ದ ಅಜಿತ್‌ ಕುಮಾರ್‌ ಸೇಥ್‌ ಅವರ ಸ್ಥಾನಕ್ಕೆ ಸಿನ್ಹಾ ಅವರನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT